ವರನಟ ರಾಜ್ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್ಕುಮಾರ್ ಕಿರಿಯ ಪುತ್ರ ಯುವರಾಜ್ಕುಮಾರ್ ಬಾಲ್ಯದ ಗೆಳತಿ ಶ್ರೀದೇವಿ ಜೊತೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ಸಭಾಂಗಣದ ಮದುವೆ ಮಂಟಪ ರಂಗು ರಂಗಿನ ಬಿಳಿ, ಕೆಂಪು ಹಾಗೂ ಹಸಿರಿನ ಚಿತ್ತಾರಗಳಿಂದ ಸಿಂಗಾರಗೊಂಡಿದೆ. ಮೈಸೂರಿನ ಮೂಲದ ಕುವರಿಯನ್ನು ರಾಘಣ್ಣ ದಂಪತಿ ಸೊಸೆಯನ್ನಾಗಿ ಬರಮಾಡಿಕೊಂಡಿದ್ದಾರೆ. ಇನ್ನು ಮದುವೆಗೆ ಭರ್ಜರಿ ಭೂರಿ ಭೋಜನ ಕೂಡ ಏರ್ಪಡಿಸಲಾಗಿದ್ದು ಸುಮಾರು 32 ಕ್ಕೂ ಹೆಚ್ಚು ರುಚಿಕರವಾದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಗಣಪತಿ ಪೂಜೆ , ಗಂಗೆ ಪೂಜೆ, ಇತ್ಯಾದಿ ಶಾಸ್ತ್ರಗಳ ಮೂಲಕ ವಿವಾಹ ಸಾಂಗವಾಗಿ ನೆರವೇರಿದ್ದು ಸ್ಯಾಂಡಲ್ವುಡ್ ತಾರೆಯರು, ಬಂಧುಗಳು ನವ ಜೋಡಿಗೆ ಶುಭಹಾರೈಸಿದ್ದಾರೆ.
ರಾಜ್ ಮೊಮ್ಮಗನ ಮದುವೆ ಆರತಕ್ಷತೆಗೆ ಸ್ಟಾರ್ಗಳ ಎಂಟ್ರಿ..!
ಈಗಾಗಲೇ ಅದ್ಧೂರಿ ಮಂಟಪದಲ್ಲಿ ನವ ಜೋಡಿಯ ಮದುವೆ ಮುಹೂರ್ತ ಸಮಾರಂಭ ನೆರವೇರಿದ್ದು ಇಂದು ಸಂಜೆ ಸುಮಾರು 6ಕ್ಕೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್ ಹಾಸನ್, ಜೂನಿಯರ್ ಎನ್ಟಿ ಆರ್ ಸೇರಿದಂತೆ ಬಹುತೇಕ ಬಾಲಿವುಡ್ನ ಖ್ಯಾತ ತಾರೆಯರು ಆಗಮಿಸಲಿದ್ದಾರೆ.
Be the first to comment