ʼಕಾಂತಾರ ಚಾಪ್ಟರ್‌ 1ʼ ನಾಯಕಿ ರುಕ್ಮಿಣಿ?

ಕಾಂತಾರ ಚಾಪ್ಟರ್‌ 1 ಸಿನಿಮಾಗೆ ರುಕ್ಮಿಣಿ ವಸಂತ ನಾಯಕಿ ಎಂಬ ಸುದ್ದಿ ಹರಿದಾಡ್ತಿದೆ.

ಕಾಂತಾರ ಪ್ರೀಕ್ವೆಲ್‌ನಲ್ಲಿ ರಿಷಬ್‌ ಶೆಟ್ಟಿಗೆ ನಾಯಕಿ ಯಾರು ಅನ್ನೋದು ಇಲ್ಲಿವರೆಗೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ.   ಮೇಕಿಂಗ್‌ ವಿಡಿಯೋ ಮೂಲಕ ಕಾಂತಾರ ಪ್ರೀಕ್ವೆಲ್‌ ಕ್ವೀನ್‌ ಯಾರು ಅನ್ನೋದು ರಿವೀಲ್‌ ಆಗಿದೆ. ರಿಲೀಸ್‌ ಆಗಿರುವ ವಿಡಿಯೋ ಭಾರೀ ಸದ್ದು ಮಾಡಿದ್ದು, ಅಭಿಮಾನಿಗಳು ನಾಯಕಿಯನ್ನು ಪತ್ತೆ ಹಚ್ಚಿದ್ದಾರೆ.

ಬೀರ್‌ ಬಿಲ್‌ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರೀಗೆ ಎಂಟ್ರಿ ಕೊಟ್ಟವರು ರುಕ್ಮಿಣಿ ವಸಂತ ದೀಗ ರುಕ್ಕು ರಿಷಬ್‌ಗೆ ಜೋಡಿ ಎನ್ನಲಾಗುತ್ತಿದೆ. ಸಪ್ತ ಸಾಗರದಾಚೆ ಎಲ್ಲೋ ಸರಣಿ ಸಿನಿಮಾ, ಬಘೀರ, ಭೈರತಿ ರಣಗಲ್‌ ಮೂಲಕ ಕನ್ನಡಿಗರನ್ನು ರಂಜಿಸಿದ ರುಕ್ಮಿಣಿ ವಸಂತ,  ಸದ್ಯ ತೆಲುಗು, ತಮಿಳಿನಲ್ಲಿ ಬ್ಯುಸಿಯಾಗಿದ್ದಾರೆ.

ಕಾಂತಾರ ಮೇಕಿಂಗ್ ವೀಡಿಯೋದಲ್ಲಿ 1 ನಿಮಿಷದ 10 ಸೆಕೆಂಡ್‌ನಲ್ಲಿ ಬರುವ ಲಾಂಗ್ ಡ್ರೋಣ್ ಶಾಟ್ ನಲ್ಲಿ ಕೊಳದ ಪಕ್ಕದಲ್ಲಿ ಒಂದಷ್ಟು ಮಹಿಳಾ ಕ್ಲಾಸಿಕಲ್ ಡ್ಯಾನ್ಸರ್ ಹೆಜ್ಜೆ ಹಾಕುತ್ತಿದ್ದಾರೆ. ಅವರ ಸಾಲಿನಲ್ಲಿ ಮುಂದೆ ನಿಂತಿರುವುದು ರುಕ್ಮಿಣಿ ವಸಂತ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಿಜಕ್ಕೂ ಅದರು ರುಕ್ಮಿಣಿನಾ ಅಥವಾ ಬೇರೆ ಅನ್ನೋದನ್ನು ಚಿತ್ರತಂಡ ಖಚಿತಪಡಿಸಬೇಕಿದೆ.

ಕಾಂತಾರ ಪ್ರೀಕ್ವೆಲ್‌ ಶೂಟಿಂಗ್‌ ಮುಗಿಸಿ ಮೇಕಿಂಗ್‌ ವಿಡಿಯೋ ಬಿಟ್ಟು ಚಿತ್ರತಂಡ ಕುತೂಹಲ ಹೆಚ್ಚಿಸಿದೆ.  ಅಕ್ಟೋಬರ್ 2ಕ್ಕೆ ಸಿನಿಮಾ ತೆರೆಗೆ ಬರಲಿದೆ. ಸದ್ಯ ಪ್ರೀ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ.

‘ಕಾಂತಾರ ಚಾಪ್ಟರ್‌ 1’ನ್ನು  ಹೊಂಬಾಳೆ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಿದೆ. ರಿಷಬ್ ಶೆಟ್ಟಿ ಕಾಂತಾರ 1 ಸಿನಿಮಾಗೆ ಆಕ್ಷನ್‌ ಕಟ್‌ ಹೇಳಿ ನಟಿಸಿದ್ದಾರೆ.  ತಾರಾಬಳಗದಲ್ಲಿ ಯಾರೆಲ್ಲಾ ಇದ್ದಾರೆ ಅನ್ನೋದನ್ನು ಚಿತ್ರತಂಡ  ಇಲ್ಲಿವರೆಗೂ  ಬಿಟ್ಟು ಕೊಟ್ಟಿಲ್ಲ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!