ʼಅವತಾರ್‌-3ʼ ಫಸ್ಟ್‌ ಲುಕ್ ರಿಲೀಸ್

ಹಾಲಿವುಡ್‌   ಖ್ಯಾತ ಸಿನಿಮಾ ಮೇಕರ್‌ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿರುವ ‘ಅವತಾರ್‌ 3’ ಸಿನಿಮಾದ ಫಸ್ಟ್‌ ಲುಕ್‌  ರಿಲೀಸ್ ಆಗಿದೆ.
ಅವತಾರ್‌ 3 ಫಸ್ಟ್‌ ಲುಕ್‌ನಲ್ಲಿ ‘ವರಂಗ್’ ಪಾತ್ರವನ್ನು ರಿವೀಲ್‌ ಮಾಡಲಾಗಿದೆ. ಈ ಪಾತ್ರವನ್ನು ಬ್ರಿಟಿಷ್ ನಟಿ ಊನಾ ಚಾಪ್ಲಿನ್ ನಿರ್ವಹಿಸುತ್ತಿದ್ದಾರೆ. ಇದು ಖಳನಾಯಕರ ಪಾತ್ರ. ಕೋಪಗೊಂಡ ಮುಖ ಮತ್ತು ಯುದ್ಧಕ್ಕೆ ಸಿದ್ಧವಾಗಿರುವ ಕಣ್ಣುಗಳ ಪೋಸ್ಟರ್ ಮತ್ತೊಂದು ಅಪಾಯಕಾರಿ ಮುಖಾಮುಖಿ ಇರಲಿದೆ ಎಂಬುದನ್ನು ಸೂಚಿಸಿದೆ.
ಬೆಂಕಿ ಮತ್ತು ಬೂದಿ ನಡುವೆ ಈ ಬಾರಿ ಅವತಾರ್‌ 3 ಕಥೆ ಸಾಗಲಿದೆ. ಚಿತ್ರ ಡಿಸೆಂಬರ್‌ 19ರಂದು ವಿಶ್ವಾದ್ಯಂತ  ತೆರೆಗೆ ಬರಲಿದೆ. ಅವತಾರ್‌ 3 ಸಿನಿಮಾದ ಟ್ರೇಲರ್‌ ಜುಲೈ 25, 2025ರಂದು ಅನಾವರಣಗೊಳ್ಳಲಿದೆ.
‘ದಿ ಫೆಂಟಾಸ್ಟಿಕ್ ಫೋರ್: ಫಸ್ಟ್ ಸ್ಟೆಪ್ಸ್’ ಥಿಯೇಟರ್‌ಗಳಲ್ಲಿ ಫಸ್ಟ್‌ ಝಲಕ್ ಬಿಡುಗಡೆಯಾಗಲಿದೆ. 4ನೇ ಭಾಗ 2029ರಲ್ಲಿ ಬಿಡುಗಡೆಯಾಗಲಿದೆ. 5ನೇ ಭಾಗ ಡಿಸೆಂಬರ್ 2031ರಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.
ಅವತಾರ್​’ ಮೊದಲ ಭಾಗ ಸಂಪೂರ್ಣ ಕಾಡಿನ ಹಿನ್ನೆಲೆಯಲ್ಲಿ ಸಾಗಿತ್ತು. ‘ಅವತಾರ್​: ದಿ ವೇ ಆಫ್​ ವಾಟರ್​’ ಚಿತ್ರ ಹೆಸರೇ ಹೇಳುವಂತೆ ನೀರಿನ ಹಿನ್ನೆಲೆಯಲ್ಲಿ ಕಥೆ ಸಾಗಿತ್ತು .ಐದು ಸಿನಿಮಾಗಳು ‘ಅವತಾರ’ ಸರಣಿಯಿಂದ ಬರಲಿವೆ.
——
Be the first to comment

Leave a Reply

Your email address will not be published. Required fields are marked *

Translate »
error: Content is protected !!