ಒಂದೇ ಕುಟುಂಬದ ಅಷ್ಟೂ ಮಂದಿ ಸಿನಿಮಾದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಪರಿಸ್ಥಿತಿ ಯಾವ ರೀತಿಯಿರಬಹುದು ಊಹಿಸಿನೋಡಿ. ಅದರಲ್ಲೂ ಅವರೆಲ್ಲರ ಬೇರೆ ಬೇರೆಚಿತ್ರಗಳು ಒಂದು ವಾರ ಹಿಂದೆ ಮುಂದೆ ರಿಲೀಸ್ ಆಗುತ್ತದೆಂದರೆ ಹೇಗಾಗಬಹುದು? ಹೌದು, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕ ದಂಪತಿಯ ಸಿನಿಮಾಗಳು ಇದೇ ಬರುವ ಜೂನ್‍ನಲ್ಲಿ ಒಟ್ಟಿಗೆ ತೆರೆಗೆ ಬರಲು ಸಿದ್ಧವಾಗಿದೆ. ‘ಐ ಲವ್ ಯು’ ಅನ್ನುತ್ತಾ ಉಪ್ಪಿ, ಜೂನ್ 14 ಕ್ಕೆ ರಿಎಂಟ್ರಿ ಕೊಟ್ರೆ, ಪ್ರಿಯಾಂಕ ನಟನೆಯ ‘ದೇವಕಿ’ ಸಿನಿಮಾ ಕೂಡ ಇದೇ ತಿಂಗಳು ರಿಲೀಸ್ ಆಗಲಿದೆಯಂತೆ.
ಇದರ ಜೊತಗೆ ದೇವಕಿ ಚಿತ್ರದ ಮೂಲಕ ಉಪ್ಪಿಯ ಮಗಳು ಐಶ್ವರ್ಯ ಚಿತ್ರರಂಗಕ್ಕೆ ಅಂಬೆಕಾಲಿಟ್ಟು ಬರುತ್ತಿದ್ದಾರೆ.ಲೋಹಿತ್ ನಿರ್ದೇಶನದ ಈ ಸಿನಿಮಾ ‘ಚೈಲ್ಡ್ ಟ್ರಾಕಿಂಗ್’ಮಾಫಿಯಾ ವಿಷಯದ ಮೇಲಿದ್ದು ಅದರ ಸುತ್ತವೇ ಸಿನಿಮಾದ ಕಥೆ ಹೆಣೆಯಲಾಗಿದೆ. ಇನ್ನು ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಖದರ್ ಪ್ರದರ್ಶಿಸಿದ್ದಾರೆ.
ಆರ್. ಚಂದ್ರು ನಿರ್ದೇಶನದ ಐ ಲವ್ ಯು ಸಿನಿಮಾದಲ್ಲಿ ಮತ್ತೆ ಉಪ್ಪಿ ವರ್ಜಿನಲ್ ಗೆಟಪ್‌ನಲ್ಲಿ ಪ್ರೀತಿ ಪ್ರೇಮದ ಪಾಠ ಹೇಳಿಕೊಡಲಿದ್ದಾರೆ.ಸಿನಿಮಾಗಳು ಈಗಾಗಲೇ ಭಾರೀ ಕ್ಯೂರಿಯಾಸಿಟಿ ಹುಟ್ಟಿಸಿದ್ದು ಇಬ್ಬರ ಸಿನಿಮಾಗಳು ಒಟ್ಟಿಗೆ ಬಂದ್ರೆ ಅಭಿಮಾನಿಗಳು ಹಬ್ಬ ಮಾಡೋದು ಪಕ್ಕಾ.
ನಿರ್ದೇಶಕ ಆರ್.ಚಂದ್ರು ‘ಐ ಲವ್ ಯು’ ಸಿನಿಮಾದಲ್ಲಿ ಉಪೇಂದ್ರ ಚಿತ್ರದ ಉಪ್ಪಿಯನ್ನು ಹೊಸವರ್ಷನಿನಲ್ಲಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂಬುದು ಪೋಸ್ಟರ್ ನೋಡಿದರೆ ಅರ್ಥವಾಗುತ್ತದೆ. ಜೊತೆಗೆ, ಉಪ್ಪಿ `ಖಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ’ ಅಂತಂದದ್ದನ್ನು, ಚಂದ್ರು `ಖಡ್ಡಾಯವಾಗಿ ಕುಟುಂಬ ಸಮೇತರಾಗಿ ಬನ್ನಿ!’ ಅನ್ನುವ ಒಕ್ಕಣೆಯನ್ನಾಗಿ ಬದಲಿಸಿ ಪೋಸ್ಟರ್‍ಗೆ ಅಂಟಿಸಿದ್ದಾರೆ. ಈ ಐಡಿಯಾಗಳು ಎಷ್ಟು ವರ್ಕ್‍್ ಔಟ ಆಗುತ್ತೋ ಕಾದುನೋಡಬೇಕಿದೆ.
ಒಟ್ಟಿನಲ್ಲಿ, `ದೇವಕಿ’ ಮತ್ತು `ಐ ಲವ್ ಯು’ ಚಿತ್ರದ ಮೂಲಕ ಸ್ಯಾಂಡಲ್‍ವಡ್‍ಗೆ ಎಂಟ್ರಿಕೊಡುತ್ತಿರುವ ಉಪ್ಪಿ&ಫ್ಯಾಮಿಲಿಗೆ ಆಲ್‍ದಿಬೆಸ್ಟ್.
– BCINEMAS
Pingback: gladiator