ಗದಾಧಾರಿ ಹನುಮಾನ್

‘ಗದಾಧಾರಿ ಹನುಮಾನ್’ ಟೀಸರ್ ಬಿಡುಗಡೆ

ಸದ್ಯ ರಿಲೀಸ್ಗೆ ರೆಡಿಯಾಗಿರೋ‌ ಗದಾಧಾರಿ ಹನುಮಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮೊದಲ ನೋಟದಲ್ಲೇ ಈ ಚಿತ್ರ ಫ್ಯಾಂಟಸಿ ಸಿನ್ಮಾದಂತೆ ಕಾಣ್ತಿದೆ.

ದುಬಾರಿ ವೆಚ್ಚದ ಗ್ರಾಫಿಕ್ಸ್ ವಿಎಫ್ ಎಕ್ಸ್ ಹಾಗೂ ಸೌಂಡ್ ಎಫೆಕ್ಟ್ಸ್ ಮೇಕಿಂಗ್ ಚಿತ್ರದ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದ್ದು, ತಂತ್ರಜ್ಞಾನದ ನೈಪುಣ್ಯದ ಜೊತೆ ಕಂಡಿರೋ ತಾರಾಬಳಗ ಈ ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ. ವಿರಾಬ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಬಸವರಾಜ್ ಹುರಕಡ್ಲಿ ಮತ್ತು ರೇಣುಕ ಪ್ರಸಾದ್.ಕೆ.ಆರ್ ಜೊತೆಯಾಗಿ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ರೋಹಿತ್ ಕೊಲ್ಲಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ.

ಗದಾಧಾರಿ ಹನುಮಾನ್

ಗದಾಧಾರಿ ಹನುಮಾನ್ ಸಾಹಸಮಯ, ಹಾರರ್ ಥ್ರಿಲ್ಲರ್, ದೈವತ್ವ ಹಾಗೂ ರಾಕ್ಷಸತ್ವದ ಕಥಾಹಂದರವಿರೋ‌ ಚಿತ್ರ.

ತಾರಕಾಸುರ ಖ್ಯಾತಿಯ ಕಿರಣ್ ( ವೈಭವ್) ಈ ಚಿತ್ರದ ನಾಯಕ. ಹೊಸ ಪ್ರತಿಭೆ ಹರ್ಷಿತಾ ನಾಯಕಿ. ಇವರೊಟ್ಟಿಗೆ ಕಲ್ಯಾಣ್ ಕೃಷ್ಣ, ರಮೇಶ್ ಪಂಡಿತ್, ಸುನಂದ ಕಲ್ಬುರ್ಗಿ, ನಾಗೇಶ್ ಮಯ್ಯ, ಶಿವಪ್ಪ, ಅರ್ಜುನ್, ಭೀಷ್ಮ, ಲೋಕೇಶ್ ನಟಿಸಿದ್ದಾರೆ.

ಗದಾಧಾರಿ ಹನುಮಾನ್

ಜ್ಯೂಡಾ ಸ್ಯಾಂಡಿ ಸಂಗೀತ, ಅರುಣ್ ಗೌಡ ಛಾಯಾಗ್ರಣ ಈ ಚಿತ್ರಕ್ಕಿದೆ. ಸಿ.ಎನ್ ಕಿಶೋರ್ ಸಂಕಲನ ಮಾಡಿದ್ದಾರೆ. ಟೈಗರ್ ಶಿವು ಸಾಹಸ ಸಂಯೋಜನೆ ಮಾಡಿದ್ದಾರೆ.

ಬೆಂಗಳೂರು,ಹಂಪಿ, ಗಂಗಾವತಿ, ಅಂಜನಾದ್ರಿ, ಕಿತ್ತೂರು, ಹೊನ್ನಾಪುರ ಹೀಗೆ ಬಹುತೇಕ ಕರ್ನಾಟಕದಲ್ಲೇ ಈ ಚಿತ್ರದ ಚಿತ್ರೀಕರಣವಾಗಿರೋದು ವಿಶೇಷ.

ಟೀಸರ್ ಲಾಂಚ್ ಮಾಡಿ ಚಿತ್ರದ ವಿಶೇಷತೆಗಳನ್ನ ಹಂಚಿಕೊಂಡ ಚಿತ್ರತಂಡ ಸದ್ಯದಲ್ಲೇ ತೆರೆಗೆ ತರೋ ಸನ್ನಾಹದಲ್ಲಿದೆ.

ಗದಾಧಾರಿ ಹನುಮಾನ್

Be the first to comment

Leave a Reply

Your email address will not be published. Required fields are marked *

Translate »
error: Content is protected !!