ಶ್ರಿತಿಕ್ ಮೋಷನ್ ಪಿಕ್ಚರ್ಸ್ ಬ್ಯಾನರ್ ನ ಮರ್ಡರ್ ಮಿಸ್ಟರಿ ಚಿತ್ರದಲ್ಲಿ ಶಿವರಾಜ್‌ಕುಮಾರ್, ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಹೊಸ ಚಿತ್ರವನ್ನುಸಾಗರ್ ಶಾ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮಾ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಬಾಲಾಜಿ ಮಾಧವನ್ ಕಥೆ ಮತ್ತು ನಿರ್ದೇಶನ ಮಾಡಲಿದ್ದಾರೆ. ಚಿತ್ರತಂಡ ಶೀಘ್ರದಲ್ಲೇ ಮುಹೂರ್ತ ಸಮಾರಂಭವನ್ನು ಯೋಜಿಸಿದ್ದು, ಅಲ್ಲಿ ಶೀರ್ಷಿಕೆ ಅನಾವರಣಗೊಳಿಸಲಿದೆ. ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.
ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಶಿವರಾಜ್‌ಕುಮಾರ್ ಕುತೂಹಲಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಅವರು ತನಿಖಾ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೂರಜ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಅರ್ಜುನ್ ಜನ್ಯ ನಿರ್ದೇಶನದ 45 ಚಿತ್ರದ ಬಿಡುಗಡೆಗಾಗಿ ಶಿವಣ್ಣ ಕಾಯುತ್ತಿದ್ದಾರೆ. ಶ್ರೀನಿ ಎ ಮತ್ತು ಪವನ್ ಒಡೆಯರ್ ಜೊತೆ ಚಿತ್ರಗಳನ್ನು ಮಾಡುತ್ತಿದ್ದಾರೆ. ಇದಲ್ಲದೆ ಸಂಜು ವೆಡ್ಸ್ ಗೀತಾ ನಿರ್ದೇಶಕ ನಾಗಶೇಖರ್ ನಿರ್ದೇಶನದ, ನಿರ್ಮಾಪಕ ಛಲವಾದಿ ಕುಮಾರ್ ಜೊತೆಯೂ ಶಿವಣ್ಣ ಒಂದು ಸಿನಿಮಾ ಮಾಡಲಿದ್ದಾರೆ.
ಶಿವಣ್ಣ ತಮ್ಮ 131ನೇ ಚಿತ್ರಕ್ಕಾಗಿ ಕೆಲವು ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.ಕೆಆರ್‌ಜಿ ಸ್ಟುಡಿಯೋಸ್ ನಿರ್ಮಿಸಿದ ಮತ್ತು ಧನಂಜಯ್ ನಟಿಸಿದ ಉತ್ತರಕಾಂಡದ ಭಾಗವಾಗಿದ್ದಾರೆ. ರಾಮ್ ಚರಣ್ ನಟಿಸಿದ ತೆಲುಗು ಚಿತ್ರ ಪೆಡ್ಡಿ ಮತ್ತು ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್ 2 ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್ ನಿರತರಾಗಿದ್ದಾರೆ.





Be the first to comment