ತಮಿಳುನಾಡಿನ ಜನರಂತೆ ನಾವು ನಮ್ಮ ಮಾತೃಭಾಷೆಯನ್ನು ಪ್ರೀತಿಸುತ್ತೇವೆ. ನಮ್ಮ ಮಾತೃಭಾಷೆಯ ವಿಷಯಕ್ಕೆ ಬಂದಾಗ ಜನರು ಖಂಡಿತವಾಗಿಯೂ ಪ್ರತಿಕ್ರಿಯಿಸುತ್ತಾರೆ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.
‘ಕೆಡಿ- ದಿ ಡೆವಿಲ್’ನ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಕಮಲ್ ನಟನೆಯ ‘ಥಗ್ ಲೈಫ್’ ಚಿತ್ರವನ್ನು ಕರ್ನಾಟಕದಲ್ಲಿ ನಿಷೇಧಿಸಿದ್ದಕ್ಕೆ ಕನ್ನಡ ಚಿತ್ರೋದ್ಯಮದಿಂದ ವಿರೋಧ ವ್ಯಕ್ತವಾಗದಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಧ್ರುವ ಸರ್ಜಾ ಉತ್ತರಿಸಿದರು.
ಥಗ್ ಲೈಫ್ ಹೊರತುಪಡಿಸಿ ಕರ್ನಾಟಕದಲ್ಲಿ ಬಿಡುಗಡೆಯಾಗಿರುವ ಪ್ರತಿಯೊಂದು ತಮಿಳು ಚಿತ್ರಗಳನ್ನೂ ಕನ್ನಡ ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ. ಕಮಲ್ ಹೇಳಿಕೆ ಕನ್ನಡಿಗರ ಸ್ವಾಭಿಮಾನಕ್ಕೆ ನೋವುಂಟು ಮಾಡಿರುವುದರಿಂದ ‘ಥಗ್ ಲೈಫ್’ ಚಿತ್ರಕ್ಕೆ ವಿರೋಧ ಹುಟ್ಟಿಕೊಂಡಿತು ಎಂದರು.
‘ಥಗ್ ಲೈಫ್’ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕಮಲ್ ಹಾಸನ್ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳಿದ ಬಳಿಕ ವಿವಾದ ಭುಗಿಲೆದ್ದಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್ಸಿಸಿ) ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ ಬಿಡುಗಡೆಯಾಗದಂತೆ ತಡೆಹಿಡಿಯಿತು. ನಂತರ ಸುಪ್ರೀಂ ಕೋರ್ಟ್ ಚಿತ್ರದ ಮೇಲಿನ ನಿಷೇಧವನ್ನು ತೆಗೆದುಹಾಕಿತು.
ನಿರ್ದೇಶಕ ಪ್ರೇಮ್ ಅವರ ಕೆಡಿ- ದಿ ಡೆವಿಲ್ ಸೆ. 4ರಂದು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ, ರಮೇಶ್ ಅರವಿಂದ್, ನೋರಾ ಫತೇಹಿ ಇತರರು ನಟಿಸಿದ್ದಾರೆ.
—-





Be the first to comment