ಮಹೇಶ್ ಬಾಬು

ಮಹೇಶ್ ಬಾಬುಗೆ ನೊಟೀಸ್

ನಟ ಮಹೇಶ್ ಬಾಬು ಅವರ ವಿರುದ್ಧ ಹಣಕಾಸು ವಂಚನೆ ಆರೋಪ ಬಂದಿದ್ದು, ನೊಟೀಸ್   ನೀಡಲಾಗಿದೆ.

ಸಾಯಿ ಸೂರ್ಯ ಡೆವೆಲಪರ್ಸ್ ಹೆಸರಿನ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಹೇಶ್ ಬಾಬು ರಾಯಭಾರಿ ಆಗಿದ್ದರು. ಸಾಯಿ ಸೂರ್ಯ ಡೆವೆಲಪರ್ಸ್, ಮಹೇಶ್ ಬಾಬು ಅವರ ಚಿತ್ರ ಬಳಸಿ  ಸೂಕ್ತ ದಾಖಲೆ ಇಲ್ಲದ, ನಿಬಂಧನೆಗಳಿಗೆ ಒಳಪಟ್ಟ ಸ್ಥಳಗಳನ್ನು ಗ್ರಾಹಕರಿಗೆ ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದೆ.  ಈಗ  ಮಹೇಶ್ ಬಾಬು ಮೇಲೆ ವಂಚನೆ ಆರೋಪ ಬಂದಿದೆ.

ಹೈದರಾಬಾದ್ ಬಳಿಯ ಬಾಲಾಪುರ ಹಳ್ಳಿ ವ್ಯಾಪ್ತಿಯಲ್ಲಿ ಲೇಔಟ್ ಮಾಡಿದ್ದ ಸಾಯಿ ಸೂರ್ಯ ಡೆವೆಲಪರ್ಸ್ ಹಲವಾರು ಮಂದಿ ಗ್ರಾಹಕರಿಗೆ  ಸುಮಾರು 35 ಲಕ್ಷದಂತೆ ಹಲವಾರು ಸೈಟುಗಳನ್ನು ಮಾರಾಟ ಮಾಡಿತ್ತು. ಆದರೆ  ಸಾಯಿ ಸೂರ್ಯ ಡೆವೆಲಪರ್ಸ್ ಮಾರಾಟ ಮಾಡಿದ್ದ ಲೇಔಟ್ ಅಸ್ಥಿತ್ವದಲ್ಲೇ ಇರಲಿಲ್ಲ. ಗ್ರಾಹಕರು ಹೇಳಿರುವಂತೆ ಸಾಯಿ ಸೂರ್ಯ ಡೆವೆಲಪರ್ಸ್, ಲೇಔಟ್​ಗೆ ಸಂಬಂಧಿಸಿದ ಬ್ರೋಚರ್​ಗಳನ್ನು ತಯಾರು ಮಾಡಿ ಗ್ರಾಹಕರಿಗೆ ನೀಡಿದೆ. ತೆ. ಬ್ರೋಚರ್​​ಗಳಲ್ಲಿ ಮಹೇಶ್ ಬಾಬು ಅವರ ಚಿತ್ರಗಳು  ಇದ್ದವು. ಸಾಯಿ ಸೂರ್ಯ ಡೆವೆಲಪರ್ಸ್, ಮಹೇಶ್ ಬಾಬುಗೆ 5.90 ಕೋಟಿ ರೂಪಾಯಿ ಸಂಭಾವನೆಯನ್ನು ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕರ ವೇದಿಕೆ, ಇಡಿ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ದೂರು ದಾಖಲಾಗಿದೆ.  ಇದೀಗ ಇಡಿ ಮಹೇಶ್ ಬಾಬುಗೆ ನೊಟೀಸ್ ಜಾರಿ ಮಾಡಿದ್ದು, ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮಹೇಶ್ ಬಾಬು ಮುಂದಿನ ದಿನಗಳಲ್ಲಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!