ಸುದೀಪ್

‘ಕೆಡಿ’ ಮಹತ್ವದ ಪಾತ್ರದಲ್ಲಿ ಸುದೀಪ್

ಧ್ರುವ ಸರ್ಜಾ ನಟಿಸಿರುವ ಬಹು ನಿರೀಕ್ಷಿತ ಕೆಡಿ ಚಿತ್ರದಲ್ಲಿ ಸುದೀಪ್ ಅವರನ್ನು ಮಹತ್ವದ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಚಿತ್ರ   ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಅವರಂತಹ ಪಾತ್ರವರ್ಗವನ್ನು ಹೊಂದಿದ್ದು, ಇದೀಗ ಚಿತ್ರದ ತಾರಾಗಣಕ್ಕೆ ಮತ್ತಷ್ಟು ತಾರಾ ಮೆರುಗು ಸೇರಿದೆ. ಸುದೀಪ್  ಅವರ ಪಾತ್ರದ ವಿವರಗಳನ್ನು ಗೌಪ್ಯವಾಗಿಡಲಾಗಿದೆ. ಈ ತಿಂಗಳ ಕೊನೆಯಲ್ಲಿ ಅವರು ಚಿತ್ರೀಕರಣಕ್ಕೆ ಬರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.

‘ದಿ ವಿಲನ್’ ಚಿತ್ರದಲ್ಲಿ ಕೊನೆಯ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ್ದ ಪ್ರೇಮ್ ಮತ್ತು ಸುದೀಪ್  ‘ಕೆಡಿ’ ಚಿತ್ರದ ಮೂಲಕ ಒಂದಾಗುತ್ತಿದ್ದಾರೆ. ‘ಕೆಡಿ’  ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗೆ ಸುದೀಪ್ ಅವರ ಮೊದಲ ಚಿತ್ರ  ಆಗಲಿದೆ.

ಈ ಹಿಂದೆ ‘ಕೆಡಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ  ಚಿತ್ರತಂಡ ಸುದೀಪ್ ಅವರನ್ನು ಆ ಪಾತ್ರಕ್ಕೆ ಅಂತಿಮಗೊಳಿಸಿದೆ ಎನ್ನಲಾಗಿದೆ.

ವೆಂಕಟ್ ಕೆ ನಾರಾಯಣ ನಿರ್ಮಿಸಿರುವ ಕೆಡಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಮತ್ತು ಮತ್ತು ಶ್ರೀನಿವಾಸ್ ಪಿ ಪ್ರಭು ಅವರ ಸಂಕಲನವಿದೆ. ಕೆಡಿ- ದಿ ಡೆವಿಲ್ ಚಿತ್ರ  ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಗುರಿ ಹೊಂದಿದೆ.

ಕೆಡಿ   ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆ ಆಗಲಿದೆ.  ಚಿತ್ರತಂಡ ಐದು ರಾಜ್ಯಗಳಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಲಿದೆ. ಪ್ರಚಾರ ಪ್ರವಾಸ  ಜುಲೈ 10 ರಂದು ಮುಂಬೈ ಮತ್ತು ಹೈದರಾಬಾದ್‌ ಮೂಲಕ ಪ್ರಾರಂಭವಾಗುತ್ತದೆ. ನಂತರ ಚೆನ್ನೈ,  ಕೇರಳ ಮತ್ತು ಬೆಂಗಳೂರಿನಲ್ಲಿ ಮುಕ್ತಾಯಗೊಳ್ಳುತ್ತದೆ. ಚಿತ್ರದ ಇಡೀ ಪಾತ್ರವರ್ಗ ಮತ್ತು ಸಿಬ್ಬಂದಿ ಈ ಕಾರ್ಯಕ್ರಮಗಳಲ್ಲಿ ಹಾಜರಿರುತ್ತಾರೆ ಎನ್ನಲಾಗಿದೆ.

ನಿಜ ಜೀವನದ ಘಟನೆಗಳಿಂದ ಪ್ರೇರಿತವಾದ ಕೆಡಿ ಚಿತ್ರ  1970 ಮತ್ತು 80 ರ ದಶಕದ ಹಳೆಯ ಬೆಂಗಳೂರಿನ ಹಿನ್ನೆಲೆಯಲ್ಲಿ ಸಾಗುತ್ತದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!