ಘೋಸ್ಟ್ ಖ್ಯಾತಿಯ ಶ್ರೀನಿ ನಿರ್ದೇಶನದ ‘ಬೀರ್‌ಬಲ್ 2’ ಚಿತ್ರ ಸದ್ದಿಲ್ಲದೆ ಔಪಚಾರಿಕ ಮುಹೂರ್ತದೊಂದಿಗೆ ಪ್ರಾರಂಭವಾಗಿದೆ.
ಈ ವಾರದ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ಬೀರ್‌ಬಲ್’ ಚಿತ್ರದ ಸೀಕ್ವೆನ್ಸ್ ಅಧಿಕೃತವಾಗಿ ಆರಂಭವಾಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಈ ಯೋಜನೆಗೆ ಬೆಂಬಲ ನೀಡುತ್ತಿದೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಶ್ರೀನಿ ಈ ಹಿಂದೆ ಬೀರ್‌ಬಲ್ ಪಾತ್ರವನ್ನು ಘೋಸ್ಟ್‌ನಲ್ಲಿ ಸೂಕ್ಷ್ಮವಾಗಿ ಸೇರಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. 2019ರಲ್ಲಿ ಬಿಡುಗಡೆಯಾದ ಮೂಲ ಬೀರ್‌ಬಲ್: ಕೇಸ್ 1′ ಚಿತ್ರದಲ್ಲಿ ನಟಿ ರುಕ್ಮಿಣಿ ವಸಂತ್ ನಟಿಸಿದ್ದರು. ಅದಾದ ಬಳಿಕ ಅವರು ರಕ್ಷಿತ್ ಶೆಟ್ಟಿ ಜೊತೆ ‘ಸಪ್ತ ಸಾಗರದಾಚೆ ಎಲ್ಲೋ’ ಮತ್ತು ಶ್ರೀಮುರಳಿ ಜೊತೆ ‘ಬಘೀರ’ ಸೇರಿದಂತೆ ಇತರ ಚಿತ್ರಗಳಲ್ಲಿ ನಟಿಸಿದ್ದಾರೆ. ಬೀರ್‌ಬಲ್ 2 ಚಿತ್ರದಲ್ಲಿ ರುಕ್ಮಿಣಿ ವಸಂತ್ ಇರುವುದಿಲ್ಲ ಎಂದು ತಿಳಿದು ಬಂದಿದೆ. ಶ್ರೀನಿ ಹೊಸ ನಾಯಕಿಯ ಹುಡುಕಾಟದಲ್ಲಿದ್ದಾರೆ.
‘ಬೀರ್‌ಬಲ್ 2’ ಚಿತ್ರದ ಪಾತ್ರವರ್ಗ ಕುರಿತು ಹೆಚ್ಚಿನ ವಿವರಗಳನ್ನು ಸದ್ಯಕ್ಕೆ ಗೌಪ್ಯವಾಗಿಡಲಾಗಿದೆ. ಶ್ರೀನಿ ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಶೀಘ್ರದಲ್ಲೇ ‘ಬೀರ್‌ಬಲ್ 2’ ಚಿತ್ರದ ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.
—-





Be the first to comment