ಕಾಲಿವುಡ್ ಸೂಪರ್ ರಜನಿಕಾಂತ್ ಕಾಲ್‍ಶೀಟ್ ನೀಡಿದರೆ ನಿರ್ಮಾಪಕ,ನಿರ್ದೇಶಕನ ಭವಿಷ್ಯ ಸೂಪರ್ ಎಂದು ಸಿನಿಪಂಡಿತರು ಹೇಳುತ್ತಾರೆ. ಅಂತಹುದರಲ್ಲಿ ಸ್ವತ: ತಾವೇ ನಟಿಸಲು ಸಿದ್ದ, ಅದು ಭಿಕ್ಷುಕನ ಪಾತ್ರವಾದರೂ ಸರಿ ಅಂತ ಕೋರಿಕೊಂಡಿರುವ ಸುದ್ದಿ ‘ಅಮರ್’ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ಚಿತ್ರತಂಡವು ವಿಷಯವನ್ನು ಬಹಿರಂಗಪಡಿಸಿದೆ. ಅಂಬರೀಷ್‍ಗೆ ಖಾಸಾ ದೋಸ್ತ್‍ಗಳಾಗಿ ಶತ್ರಘ್ನಾಸಿನ್ನಾ, ಮೋಹನ್ ಬಾಬು ಮತ್ತು ರಜನಿಕಾಂತ್ ಕೊನೆವರೆಗೂ ಇದ್ದರು. ಪುತ್ರ ಅಭಿಷೇಕ್‍ಅಂಬರೀಷ್ ನಟಿಸಿರುವ ಇದೇ ಸಿನಿಮಾಕ್ಕೆ ಕೈಲಾದಷ್ಟು ಬೆಂಬಲ ನೀಡಲು ಇವರೆಲ್ಲರೂ ಆಸಕ್ತಿ ತೋರಿಸಿದ್ದಾರೆಂದು ನಿರ್ದೇಶಕರು ಮಾಹಿತಿ ನೀಡಿದರು. ಅಂತಹ ದೊಡ್ಡ ಕಲಾವಿದರಿಗೆ ಸೂಕ್ತ ಅನಿಸುವಂತ ಪಾತ್ರ ಇರದಿದ್ದರೆ, ನ್ಯಾಯ ಒದಗಿಸಿದಂತೆ ಆಗುವುದಿಲ್ಲವೆಂಬ ಕಾರಣಕ್ಕೆ ಖುದ್ದು ಅಂಬರೀಷ್ ಇವರೆಲ್ಲರನ್ನು ಸೇರಿಸಿಕೊಳ್ಳಲು ಮನಸ್ಸು ಮಾಡಿರಲಿಲ್ಲವಂತೆ.
ಅಲ್ಲದೆ ಎಲ್ಲಾ ಸ್ಟಾರ್‍ಗಳನ್ನು ಸೇರಿಸಿ ಒಂದು ಹಾಡು ಮಾಡುವ ಬಗ್ಗೆ ರೆಬಲ್‍ಸ್ಟಾರ್ ಕನಸು ಆಗಿತ್ತು ಕೂಡ. ಆದರೆ ಅವರೇ ಇಲ್ಲದ ಇಂತಹ ಹಾಡು ಅಗತ್ಯವಿಲ್ಲವೆಂದು ನಿರ್ದೇಶಕ ನಾಗಶೇಖರ್ ಕೈ ಬಿಟ್ಟಿದ್ದಾರೆ. ಅಂದ ಹಾಗೆ ಚಿತ್ರವು ನೈಜ ಘಟನೆಯಾಗಿದ್ದು, 90ರ ದಶಕದಲ್ಲಿ ಪಂಚಭಾಷ ತಾರೆಯ ನಾಯಕಿಯೊಬ್ಬರ ಜೀವನದಲ್ಲಿ ನಡೆದ ಕತೆಯಾಗಿದ್ದು, ಆ ನಟಿ ಯಾರು ಎಂಬುದನ್ನು ತಂಡವು ಹೇಳದೆ ಗೌಪ್ಯತೆಯನ್ನು ಕಾಪಾಡಿಕೊಂಡಿದೆ. ಚಂದನವನದಲ್ಲಿ ಮೊದಲು ಎನ್ನುವಂತೆ ಕೊಡಗು ಭಾಷೆಯ ಕಿರಿಣ್‍ಕಾವೇರಪ್ಪ ಸಾಹಿತ್ಯದ ಗೀತೆಯನ್ನು ಜೆಸ್ಸಿಗಿಫ್ಟ್ ಹಾಡಿದ್ದು, ಇದನ್ನು ವೀರಯೋಧರಿಗೆ ಅರ್ಪಿಸಲಾಗಿದೆ. 85 ದಿನಗಳ ಕಾಲ ಮಣಿಪಾಲ್, ಮೈಸೂರು, ಮಡಕೇರಿ, ಸುಲ್ತಾನ್‍ಪುರಿ, ಊಟಿ, ಸ್ವಿಟ್ಜರ್‍ಲ್ಯಾಂಡ್ , ಮಲೇಶಿಯಾ ಮತ್ತು ಕೊಯಮತ್ತೂರುದಲ್ಲಿ ರಿಯಲ್ ಬೈಕ್ ರೇಸ್ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ. ನೈಸರ್ಗಿಕಕ್ಕೆ ಸಂಬಂದಿಸಿದಂತೆ ಸಂದೇಶವನ್ನು ಹೇಳಲಾಗಿದೆ.
ನಾಯಕ ಅಭಿಷೇಕ್‍ಅಂಬರೀಷ್ ನೆಗಟೀವ್ ಡೈಲಾಗ್ ಹೇಳುವುದರೊಂದಿಗೆ ಪರಿಚಯಿಸಲಾಗಿದೆ. ನಾಯಕಿ ತಾನ್ಯಾಹೋಪ್. ಇವರೊಂದಿಗೆ ದೇವರಾಜ್, ಸುಧಾರಾಣಿ, ದೀಪಕ್‍ಶೆಟ್ಟಿ, ಸಾಧುಕೋಕಿಲ, ಚಿಕ್ಕಣ್ಣ, ಅರುಣ್‍ಸಾಗರ್ ಮುಂತಾದವರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ದರ್ಶನ್, ನಿರೂಪ್‍ಭಂಡಾರಿ, ಒಂದು ಹಾಡಿಗೆ ರಚಿತಾರಾಮ್ ಸೇರಿದಂತೆ ಮತ್ತಷ್ಟು ಚೆಲುವೆಯರು ಕುಣಿದಿದ್ದಾರೆ. ನಾಲ್ಕು ಹಾಡುಗಳಿಗೆ ಅರ್ಜುನ್‍ಜನ್ಯಾ ಸಂಗೀತವಿದೆ. ಛಾಯಾಗ್ರಹಣ ಸತ್ಯಾಹೆಗಡೆ, ಸಾಹಸ ಥ್ರಿಲ್ಲರ್‍ಮಂಜು-ರವಿವರ್ಮ, ಸಂಕಲನ ಶ್ರೀಕಾಂತ್ ನಿರ್ವಹಿಸಿದ್ದಾರೆ. ಸಿನಿಮಾವು ಚೆನ್ನಾಗಿ ಬರಲೆಂದು ಎಲ್ಲಿಯೂ ರಾಜಿಯಾಗದೆ ನೀರಿನಂತೆ ಖರ್ಚು ಮಾಡಿರುವ ಎನ್.ಸಂದೇಶ್ ಚಿತ್ರವನ್ನು ಅಂಬರೀಷ್ ಹುಟ್ಟುಹಬ್ಬಕ್ಕೆ ಕಾಣಿಕೆಯಾಗಿ ನೀಡಲು ಇದೇ 31ರಂದು ಸುಮಾರು 250 ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
Pingback: like it