ಅದೊಂದಿತ್ತು ಕಾಲ

ಆಗಸ್ಟ್ 29ರಂದು ‘ಅದೊಂದಿತ್ತು ಕಾಲ’ ರಿಲೀಸ್

ವಿನಯ್ ರಾಜಕುಮಾರ್ ಹಾಗೂ ನಿಶಾ ರವಿಕೃಷ್ಣನ್ ನಟನೆಯ ‘ಅದೊಂದಿತ್ತು ಕಾಲ’ ಚಿತ್ರ ಆಗಸ್ಟ್ 29ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಈಗಾಗಲೇ ಚಿತ್ರದ ಮೊದಲ ಹಾಡು ಮುಂಗಾರು ಮಳೆಯಲ್ಲಿ 36 ಮಿಲಿಯನ್ ವೀಕ್ಷಣೆ ಕಂಡಿದ್ದು ಗಮನ ಸೆಳೆದಿದೆ. ಈ ಹಾಡಿಗೆ ರಾಘವೇಂದ್ರ ವಿ ಸಂಗೀತ ಸಂಯೋಜಿಸಿದ್ದಾರೆ. ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಹಾಡಿನಲ್ಲಿ ವಿನಯ್ ರಾಜಕುಮಾರ್ ಮತ್ತು ನಿಶಾ ತೊಂಬತ್ತರ ದಶಕದ ಶಾಲಾ ವಿದ್ಯಾರ್ಥಿಗಳಾಗಿ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

’16 ವರ್ಷದ ಹುಡುಗನ ಪಾತ್ರ ನಿರ್ವಹಿಸುವುದು ಸವಾಲಿನಿಂದ ಕೂಡಿತ್ತು. ಈ ಪಾತ್ರಕ್ಕಾಗಿ ತೂಕ ಇಳಿಸಿಕೊಳ್ಳುವುದು ಕಷ್ಟಕರ ಆಗಿತ್ತು. ಈ ಪಾತ್ರ ಶಾಲಾ ದಿನಗಳನ್ನು ನೆನಪಿಸಿದೆ’ ಎಂದು ವಿನಯ್ ರಾಜಕುಮಾರ್ ಹೇಳಿದ್ದಾರೆ.

‘ನನ್ನ ಪಾತ್ರ ಚಿಕ್ಕದಾಗಿದೆ. ಆದರೆ ಮಹತ್ವದ್ದಾಗಿದೆ. ವಿನಯ್ ಜೊತೆ ಕೆಲಸ ಮಾಡುವುದು ಸಂತೋಷ ತಂದಿದೆ’ ಎಂದು ನಿಶಾ ರವಿಕೃಷ್ಣನ್ ಹೇಳಿದ್ದಾರೆ.

ಚಿತ್ರವನ್ನು ಕೀರ್ತಿ ಕೃಷ್ಣಪ್ಪ ಅವರು ನಿರ್ದೇಶಿಸಿದ್ದಾರೆ. ಅದಿತಿ ಪ್ರಭುದೇವ, ಜಗಪ್ಪ, ಅರುಣಾ ಬಾಲರಾಜ್ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಅಭಿಷೇಕ್ ಕಾಸರಗೋಡು ಛಾಯಾಗ್ರಹಣ, ಕೀರ್ತಿ ಸಂಕಲನವನ್ನು ಮಾಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!