ಅದ್ಯಾಕೋ ಗೊತ್ತಿಲ್ಲ, ಬಹುಪಾಲು ಹೊಸ ನಿರ್ದೇಶಕರು ತಮ್ಮ ಚೊಚ್ಚಲ ಪ್ರಯತ್ನಕ್ಕೆ ಹಾರರ್ ಜಾನರ್ ಅನ್ನೇ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಕಡಿಮೆ ಬಜೆಟ್ನರಲ್ಲಿ ಹಾರರ್ ಚಿತ್ರ ಮಾಡಿಮುಗಿಸಿ, ‘ಹಾಕಿದ ದುಡ್ಡು ಬಂತು’ ಅಂತಂದು ಸೇಫ್ ಆಗೋ ಐಡಿಯಾವಾ? ಅಥವಾ, ಹಾರರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ರೆ ಬೇಗನೆ ಗುರುತಿಸಿಕೊಳ್ಳಬಹುದು ಅನ್ನುವ ಹೊಸ ನಿರ್ದೇಶಕನ ಯೋಚನೆಯಾ? ಹೀಗೆ ಹಲವು ಪ್ರಶ್ನೆಗಳು ಎದರಾಗುತ್ತವೆ. ಆದರೆ, ‘ರತ್ನಮಂಜರಿ’ ಚಿತ್ರ ನೊಡಿದ ಮೇಲೆ ಹಾರರ್ ಚಿತ್ರಗಳ ಬಗ್ಗೆ ಇರುವ ಪ್ರಶ್ನೆಗಳೇ ತಪ್ಪು ಎಂದೆನೆಸಿಬಿಡುತ್ತದೆ. ಬಿಕಾಸ್, ಬಜೆಟ್ ವಿಚಾರದಲ್ಲಿ ‘ರತ್ನಮಂಜರಿ’ ದೊಡ್ಡ ಬಜೆಟ್ನಗ ಚಿತ್ರವೇ. ಎಲ್ಲಿಯೂ ಕಾಂಪ್ರಮೈಸ್ ಆಗದೇ, ಟೆಕ್ನಿಕಲ್ ವಿಚಾರದಲ್ಲಾಗಲೀ.. ಪ್ರಮೋಶನ್ ವಿಚಾರದಲ್ಲಾಗಲಿ ಚಿತ್ರತಂಡ ಸಂಪೂರ್ಣವಾಗಿ ಚಿತ್ರಕ್ಕೆ ನ್ಯಾಯ ಒದಗಿಸಿದೆ. ಇನ್ನು ನವನಿರ್ದೇಶಕ ಪ್ರಸಿದ್ಧ್ ಹಾರರ್ ಜಾನರ್ನವ ಚಿತ್ರವೆಂದು ರೀಲ್ಸುೂತ್ತದೆ ಸಾಕಷ್ಟು ಸಿದ್ಧತೆ&ಬದ್ಧತೆಯ ಮೂಲಕ ಚಿತ್ರ ಮಾಡಿದ್ದಾರೆ.
ಸಂಪೂರ್ಣ ಹೊಸಬರೇ ತುಂಬಿ ತುಳಿಕಿರುವ ಈ ಚಿತ್ರದಲ್ಲಿ ಅಷ್ಟೇ ತಾಜಾತನವನ್ನೂ ಕಾಣಬಹುದು. ಇಡೀ ಸಿನಿಮಾ ನೋಡಿ ಹೊರಬಂದ ಮೇಲೆ ಇದು ಹೊಸಬರ ಸಿನಿಮಾ ಎನಿಸದು. ಹಾರರ್ ಸಿನಿಮಾದ ಜೀವಾಳವೇ ಥ್ರಿಲ್ಲಿಂಗ್ ಎನಿಸುವಂತಹ ಚಿತ್ರಕಥೆ ಮತ್ತು ಬೆಚ್ಚಿ ಬೀಳಿಸುವ ಹಿನ್ನೆಲೆ ಸಂಗೀತ. ಇವೆರಡೂ ವಿಚಾರದಲ್ಲಿ ನಿರ್ದೇಶಕ ಪ್ರಸಿದ್ಧ್ ಗೆದ್ದಿದ್ದಾರೆ. ಪ್ರಸಿದ್ಧ್ ತಮ್ಮ ಚೊಚ್ಚಲ ಚಿತ್ರದಲ್ಲೇ ತಮ್ಮ ಕ್ವಾಲಿಟೀ&ಕಂಟೆಂಟ್ ಸಾಕಷ್ಟು ತಲೆಕೆಡಿಸಿಕೊಂಡಿದ್ದು ನೋಡಿದರೆ, ಇವರು ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಉತ್ತಮ ಚಿತ್ರಗಳನ್ನು ಕೊಡುವುದು ಖಂಡಿತ.
ಡಿಫೆರೆಂಟ್ಟೈಟಲ್ ಕಾರ್ಡ್ ಮಾಡುವ ಮೂಲಕ ಚಿತ್ರ ಆರಂಭಿಸುವ ಪ್ರಸಿದ್ಧ್ ಅವರ ಕಥೆಯಲ್ಲಿ ಇರುವುದಾದರೂ ಏನು?. ಅಮೆರಿಕದಲ್ಲಿ ಬಾಟನಿಸ್ಟ್ ಆಗಿ ಕೆಲಸ ಮಾಡುತ್ತಿರುವ ಸಿದ್ಧಾಂತ್ (ರಾಜ್ ಚರಣ್) ತನ್ನ ಪ್ರೇಯಸಿ ಗೌರಿ (ಅಖಿಲಾ) ಮದುವೆಯಾಗಿ ಜೀವನ ಆರಂಭಿಸುತ್ತಾರೆ. ಅಲ್ಲೇ ಇವರ ಮನೆ ಪಕ್ಕದಲ್ಲಿ ಕನ್ನಡಿಗ ದಂಪತಿಯೊಬ್ಬರು ವಾಸವಿರುತ್ತಾರೆ. ಅವರು ಸಿದ್ಧಾಂತ್ ಮತ್ತು ಗೌರಿಗೆ ಆತ್ಮೀಯರಾಗಿರುತ್ತಾರೆ. ಇಂತಹ ಸಮಯದಲ್ಲಿ ನಾಯಕ ನಾಯಕಿ ಭಾರತಕ್ಕೆ ಬಂದು ಅಮೆರಿಕಕ್ಕೆ ವಾಪಸ್ ಹೋದಾಗ ಆ ದಂಪತಿಯ ಕೊಲೆಯಾಗಿರುತ್ತದೆ. ಈ ಕೊಲೆ ಯಾಕಾಯಿತು ಎಂಬುದರ ಹಿಂದೆ ಹೊರಡುವ ಕಥೆಯೇ ರತ್ನಮಂಜರಿ. ಈ ಸಿನಿಮಾಗೆ ರತ್ನಮಂಜರಿ ಎಂಬ ಟೈಟಲ್ ಯಾಕೆ? ಕೊಡಗಿಗೂ, ಅಮೆರಿಕಕ್ಕೂ ನಂಟು ಏನು ಎಂಬುದು ಈ ಚಿತ್ರದಲ್ಲಿದೆ. ಅದೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು. ಇಡೀ ಚಿತ್ರದ ಸಸ್ಪೆನ್ಸ್ ಅಂಶವನ್ನೂ ಇಲ್ಲೇ ಹೇಳಿಬಿಟ್ಟರೆ ಅದು ಹೊಸಬರ ಶ್ರಮಕ್ಕೆ ಎಳ್ಳು-ನೀರು ಬಿಟ್ಟಂತೆ ಅಲ್ಲವೇ?
ಸಸ್ಪೆನ್ಸ್ ಮತ್ತು ಹಾರರ್ ಎರಡನ್ನೂ ನಿರ್ದೇಶಕ ಪ್ರಸಿದ್ಧ್ ಹದವಾಗಿ ಮಿಕ್ಸ್ ಮಾಡಿದ್ದರಿಂದ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಚಿತ್ರದ ಲೆಂತ್ ಇನ್ನಷ್ಟು ಕಡಿಮೆ ಮಾಡಿದ್ದರೆ ಸಿನಿಮಾ ಇನ್ನಷ್ಟು ಆಪ್ತವಾಗುತ್ತಿತ್ತು, ಎಂದು ಸಿನಿಮಾ ವಿಮರ್ಶೆಗೆಂದೇ ಚಿತ್ರ ನೋಡುತ್ತಿರುವವರಿಗೆ ಖಂಡಿತಾ ಅನ್ನಿಸಬಹುದು. ಆದರೆ, ಚಿತ್ರದಲ್ಲಿರುವ ಹಲವು ಟ್ಯ್ರಾಕ್ಗುಳನ್ನು ನೋಡುಗನಿಗೆ ರೀಚ್ ಮಾಡಬೇಕಾದರೆ ನಿರ್ದೇಶಕ ಸಾಕಷ್ಟು ಡಿಟೈಲ್ಸ್ಗದಳಿಗೆ ಒತ್ತುಕೊಡಬೇಕಿದೆ. ಈ ಡಿಟೈಲ್ಸ್ಗ ಳು ಒಬ್ಬ ಸಾಮಾನ್ಯ ನೋಡಗನಿಗೆ ಲ್ಯಾಗ್ ಅನ್ನಿಸುವುದಿಲ್ಲ, ಬದಲಾಗಿ ಆದನ್ನು ಎಂಜಾಯ್ ಮಾಡುತ್ತಾನೆ. ಹಿನ್ನೆಲೆ ಸಂಗೀತ ಹಾರರ್ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ. ಹಿನ್ನಲೆ ಸಂಗೀತ ಪ್ರಸಿದ್ಧರ ಚಿತ್ರವನ್ನು ಇನ್ನಷ್ಟು ಪ್ರಸಿದ್ಧಿಗೆ ಕೊಂಡೋಯ್ದಿದೆ. ಇನ್ನು ಹಾಡುಗಳು ಸುಮಧುರವಾಗಿದ್ದು, ಪ್ರತಿ ಹಾಡುಗಳು ಇಷ್ಟವಾಗುತ್ತದೆ.
ಸಂಗೀತದ ಜತೆಗೆ ಕೋರಿಯೋಗ್ರಫಿ ಮತ್ತು ಹಾಡುಗಳ ಮೇಕಿಂಗ್ ಕೂಡಾ ಗಮನ ಸೆಳೆಯುವಂತಿದೆ. ನಾಯಕ ರಾಜ್‌ಚರಣ್ ಭರವಸೆ ನಟನಾಗುವ ಲಕ್ಷಣ ಇದೆ. ಅಖಿಲಾ ಪ್ರಕಾಶ್ ಮತ್ತು ಇನ್ನುಳಿದ ನಾಯಕಿಯರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಉಳಿದಂತೆ ನಟಿಸಿರುವ ಎಲ್ಲ ಕಲಾವಿದರು ಸಂಪೂರ್ಣ ಒಹೊಸಬರಾಗಿದ್ದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಗೆದ್ದಿದ್ದಾರೆ.
ಕೊಡಗಿನ ಸಂಸ್ಕೃತಿ ಮತ್ತು ಆಚಾರಗಳನ್ನು ತಿಳಿಸುವ ಪ್ರಯತ್ನದಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಹಾರರ್ ಅಂಶಗಳನ್ನು ಇಷ್ಟಪಡುವ ಮತ್ತು ಥ್ರಿಲ್ಲರ್ ಸಬ್ಜೆಕ್ಟ್‌ಗಳ ಪ್ರಿಯರಿಗೆ ರತ್ನ ಮಂಜರಿ ಇಷ್ಟವಾಗುತ್ತದೆ. ಅಷ್ಟಾಗಿಯೂ ಒಮ್ಮೆ ನೋಡಬಹುದಾದ ಚಿತ್ರಗಳ ಸಾಲಿನಲ್ಲಿ ಇದು ನಿಲ್ಲುತ್ತದೆ. ಒಟ್ಟಿನಲ್ಲಿ ಒಂದು ಹೊಸ ತಂಡದ ಪ್ರಮಾಣಿಕ ಪ್ರಯತ್ನ ಪ್ರೇಕ್ಷಕನ ನಿರೀಕ್ಷೆಯನ್ನು ತಣಿಸುವಲ್ಲಿ ಯಶಸ್ವಿಯಾಗಿದೆ.
– BCINEMAS. IN
Pingback: Schertz Towing