ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 50ನೇ ಚಿತ್ರ ಕುರುಕ್ಷೇತ್ರ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದಂದು ತೆರೆಗಪ್ಪಳಿಸಲಿದೆ. ಈ ಮೂಲಕ ದುರ್ಯೋಧನನಾಗಿ ನಟಿಸಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿಮನ್ಯು ಪಾತ್ರಕ್ಕೆ ಜೀವ ತುಂಬಿರೋ ನಿಖಿಲ್ ಕುಮಾರಸ್ವಾಮಿ ನಟನೆಯ ಯುದ್ಧಕ್ಕೆ ಥಿಯೇಟರ್ಗಳು ಸಾಕ್ಷಿಯಾಗಲಿವೆ..!
ಚಿತ್ರ ಬಿಡುಗಡೆ ಕುರಿತಂತೆ ನಿರ್ಮಾಪಕ ಮುನಿರತ್ನಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ಸಿನಿಮಾ ಬಿಡುಗಡೆಯಾಗೋದು ಲೇಟ್ ಆಗೋಕೆ ಕಾರಣ 3D ಕೆಲಸ. ಸಾಮಾನ್ಯ ಸಿನಿಮಾಗೇ 3D ಕೆಲಸ ಮಾಡೋದು ಕಷ್ಟ. ಪೌರಾಣಿಕ ಸಿನಿಮಾಗೆ ತ್ರೀಡಿ ಮಾಡೋದು ಇನ್ನೂ ಕಷ್ಟ. ಕುರುಕ್ಷೇತ್ರ 2ಡಿ ಸಿನಿಮಾಗೆ ಆರು ತಿಂಗಳ ಹಿಂದೆಯೇ ಸೆನ್ಸಾರ್ ಮಂಡಳಿಯ ಅನುಮತಿ ಸಿಕ್ಕಿದೆ. ಇದೀಗ ತ್ರಿಡಿ ಸಿನಿಮಾ ಕೂಡ ಸಿದ್ಧವಾಗಿದೆ ಎಂದು ಹೇಳಿದರು.
ಜುಲೈ ಮೊದಲ ವಾರದಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಲಾಗುವುದು. ಆಡಿಯೋ ಹಕ್ಕು ಲಹರಿ ಕಂಪನಿ ಪಾಲಾಗಿದ್ದು, ಸ್ಯಾಟ್ ಲೈಟ್ ಹಕ್ಕನ್ನು ‘ಝೀ ಟಿವಿ’ ಪಡೆದಿದೆ. ದೊಡ್ಡ ಮೊತ್ತವನ್ನ ನೀಡಿ ಕುರುಕ್ಷೇತ್ರ ಡಬ್ಬಿಂಗ್ ರೈಟ್ಸ್ 9.5 ಕೋಟಿ ಹಾಗೂ ಕನ್ನಡದ ಸಾಟ್ಲೈಟ್ ಹಕ್ಕು 9 ಕೋಟಿಗೆ ಮಾರಾಟವಾಗಿದೆ.
ಕುರುಕ್ಷೇತ್ರ ಚಿತ್ರದ ಅವಧಿ 2 ಗಂಟೆ 55 ನಿಮಿಷ ಇದೆ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಕುರುಕ್ಷೇತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ದೊಡ್ಡ ತಾರಬಳಗವೇ ಇದ್ದು, ಬಾಕ್ಸಾಫೀಸ್ ಕೊಳ್ಳೆ ಹೊಡೆಯಲು ಸಜ್ಜಾಗಿದೆ.
ನಾಗಣ್ಣ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಕುರುಕ್ಷೇತ್ರ’ದಲ್ಲಿ ಪ್ರಮುಖವಾದ ದುರ್ಯೋದನ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡರೆ, ಭೀಷ್ಮನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಬಣ್ಣ ಹಚ್ಚಿದ್ದರು. ಇನ್ನು, ಅಭಿಮನ್ಯು ಆಗಿ ನಿಖಿಲ್ ಕುಮಾರಸ್ವಾಮಿ ಮಿಂಚಿದ್ದಾರೆ. ಅರ್ಜುನ್ ಸರ್ಜಾ, ಶಶಿಕುಮಾರ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದೆ.
Be the first to comment