ಲವ್ OTP

ಕನ್ನಡ, ತೆಲುಗಿನಲ್ಲಿ ಅನೀಶ್ ಲವ್ OTP

ಲವ್ OTP ಅನ್ನೋ ಇವತ್ತಿಮ ಟ್ರೆಂಡಿಗೆ ತಕ್ಕಂತೆ ಲವ್ ಈ ಯುಗದ ಲವ್ ಬ್ರ್ಯಾಂಡಿಗೆ ತಕ್ಕಂತೆ ಟೈಟಲ್ ಅನೌನ್ಸ್ ಮಾಡಿ ಹುಬ್ಬೇರಿಸಿದ್ದ ನಟ ನಿರ್ದೇಶಕ ಅನೀಶ್ ತೇಜೇಶ್ವರ್ ಇದೀಗ ಸಿನಿಮಾನ ಪ್ರೇಕ್ಷಕರೆದುರಿಗೆ ತಲುಪಿಸೋ ಹೊಸ್ತಿಲಲ್ಲಿದ್ದಾರೆ. ಅದ್ರಂತೆ ಹೈದ್ರಾಬಾದಿನಲ್ಲಿ ಚಿತ್ರತಂಡ ಬೀಡುಬಿಟ್ಟಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಮುಗಿಸುತ್ತಿದೆ.

ಈ ನಡುವೆ ಚಿತ್ರದ ಮುಹೂರ್ತ ವಿಡಿಯೋನ ಹಂಚಿಕೊಂಡು ನಾವು ಸದ್ಯದಲ್ಲೇ ಬರೋ ಸೂಚನೆ ಕೊಟ್ಟಿದೆ.

ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸುತ್ತಿರುವ ಲವ್ OTP ಚಿತ್ರವನ್ನ ಭಾವಪ್ರೀತ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ ವಿಜಯ್ ಎಂ ರೆಡ್ಡಿ ನಿರ್ಮಾಸ್ತಿದ್ದಾರೆ.

ಲವ್ OTP ಚಿತ್ರಕ್ಕೆ ಗುಣಮಟ್ಟದ ತಾರಾಗಣ ತಂತ್ರಜ್ಞರ ದಂಡೇ ಕೆಲಸ ಮಾಡಿದ್ದು, ಹಾಗೇ ಹಲವಾರು ವಿಶೇಷ ವಿಚಾರಗಳು ಅಚ್ಚರಿಗಳು ಈ ಸಿನಿಮಾ ತುಂಬೆಲ್ಲಾ ಇದ್ದು, ಎಲ್ಲವನ್ನೂ ಒಂದೊಂದಾಗಿ‌ ವಿವರಿಸುತ್ತಾ ಪ್ರಚಾರ ಮಾಡೋ ಯೋಚನೆಯಲ್ಲಿದೆ ಚಿತ್ರತಂಡ.

ಲವ್ OTP

Be the first to comment

Leave a Reply

Your email address will not be published. Required fields are marked *

Translate »
error: Content is protected !!