ಚಿತ್ರ: X & Y
ನಿರ್ದೇಶನ: ಡಿ ಸತ್ಯ ಪ್ರಕಾಶ್
ನಿರ್ಮಾಣ: ಸತ್ಯ ಪಿಕ್ಚರ್ಸ್
ತಾರಾ ಬಳಗ: ಡಿ ಸತ್ಯ ಪ್ರಕಾಶ್, ಬೃಂದಾ ಆಚಾರ್ಯ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಇತರರು
ರೇಟಿಂಗ್: 3.5
ಜೀವ ಹಾಗೂ ಬದುಕಿನ ಮೌಲ್ಯದ ಬಗ್ಗೆ ತಿಳಿಸುವ ಚಿತ್ರ ಈ ವಾರ ತೆರೆಗೆ ಬಂದಿರುವ X & Y.
ಈ ಚಿತ್ರ ಮೇಲ್ನೋಟಕ್ಕೆ ಎಕ್ಸ್ ಹಾಗೂ ವೈ ಕ್ರೋಮೋಸೋಮ್ ಬಗ್ಗೆ ಇದೆ. ಗಂಡು ಹಾಗೂ ಹೆಣ್ಣು ಹುಟ್ಟಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ರೀತಿ ಭೂಮಿಗೆ ಹುಟ್ಟಿ ಬರುವ ಜೀವ ತನ್ನ ತಂದೆ ತಾಯಿ ಯಾರೆಂದು ತಿಳಿಯುವ ಆತುರದಲ್ಲಿ ಎದುರಿಸುವ ಬದುಕಿನ ದರ್ಶನ ಈ ಚಿತ್ರದಲ್ಲಿದೆ.
ನಿರ್ದೇಶಕರು ಆರಿಸಿಕೊಂಡಿರುವ ಕಥಾವಸ್ತು ಈ ಕಾಲಘಟ್ಟಕ್ಕೆ ಎಲ್ಲರಿಗೂ ಇಷ್ಟವಾಗುವಂತಿದೆ. ಎಲ್ಲರಿಗೂ ಇಷ್ಟವಾಗುವ ವಿಚಾರಗಳನ್ನು ಮನೋರಂಜನೆಯ ಮೂಲಕ ನಿರ್ದೇಶಕರು ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಜೀವ ಹಾಗೂ ಜೀವನದ ಮೌಲ್ಯದ ಬಗ್ಗೆ ಅರಿವು ಮೂಡಿಸುವುದು ಎಷ್ಟು ಮುಖ್ಯ ಎನ್ನುವುದನ್ನು ಇಲ್ಲಿ ಹೇಳುವ ಯತ್ನವನ್ನು ಮಾಡಲಾಗಿದೆ.
ಮುಖ್ಯ ಪಾತ್ರದಲ್ಲಿ ಸತ್ಯಪ್ರಕಾಶ್ ಅವರು ಉತ್ತಮವಾಗಿ ನಟಿಸಿದ್ದಾರೆ. ಬುದ್ಧಿಮಾಂಧ್ಯನ ಪಾತ್ರದಲ್ಲಿ ಅಥರ್ವ ಪ್ರಕಾಶ್ ಮಿಂಚಿದ್ದಾರೆ. ನಾಯಕಿ ಬೃಂದಾ ಆಚಾರ್ಯ ಮುದ್ದಾಗಿ ಕಾಣಿಸಿದ್ದಾರೆ. ಅವರು ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಕಥೆಗೆ ಪೂರಕವಾಗಿ ನಟಿಸಿದ್ದಾರೆ.
ಛಾಯಾಗ್ರಹಣ, ಹಿನ್ನಲೆ ಸಂಗೀತ, ಗ್ರಾಫಿಕ್ ಚಿತ್ರ ಸೊಗಸಾಗಿ ನೋಡಿ ಬರಲು ಕಾರಣವಾಗಿದೆ. ಕುಟುಂಬ ಸಮೇತ ನೋಡುವ ಚಿತ್ರ ಇದಾಗಿದ್ದು, ಚಿತ್ರದ ಆರಂಭ ಹಾಗೂ ಕೊನೆಯ ದೃಶ್ಯಗಳು ವಿಶೇಷವಾಗಿವೆ.





Be the first to comment