ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಂಭಾವನೆ ಕಮ್ಮಿ ಮಾಡಿಕೊಂಡಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ.
ಕಿರಿಕ್ ಪಾರ್ಟಿ ಚಿತ್ರದ ನಂತರ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನಟಿಸಿದ್ದಾರೆ. ಸದ್ಯ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರ ಸಾಲಿನಲ್ಲಿ ನಟಿ ರಶ್ಮಿಕಾ ಕೂಡಾ ಒಬ್ಬರು. ಆದರೆ ಸಲ್ಮಾನ್ ಖಾನ್ ಜೊತೆ ನಟಿಸಿದ `ಸಿಕಂದರ್’ ಸಿನಿಮಾ ರಶ್ಮಿಕಾ ಕೆರಿಯರ್‌ಗೆ ದೊಡ್ಡ ಆಘಾತ ತಂದೊಡ್ಡಿದೆ.
ಟಾಲಿವುಡ್‌ನಲ್ಲಿ ಸ್ಟಾರ್ ನಟರ ಜೊತೆ ಸಿನಿಮಾಗಳನ್ನ ಮಾಡಿರುವ ರಶ್ಮಿಕಾಗೆ ಪುಷ್ಪ ಪಾರ್ಟ್-1 ಹಾಗೂ ಪುಷ್ಪ-2 ಸಿನಿಮಾಗಳು ಮೈಲೇಜ್ ನೀಡಿವೆ. ಬಾಲಿವುಡ್‌ನಲ್ಲಿ ನಟಿಸಿದ ಅನಿಮಲ್ ಸಿನಿಮಾ ರಶ್ಮಿಕಾಗೆ ಡಿಫರೆಂಟ್ ಇಮೇಜ್ ಕ್ರಿಯೇಟ್ ಮಾಡಿದೆ. ರಶ್ಮಿಕಾ ಮಂದಣ್ಣ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸಲ್ಮಾನ್ ಖಾನ್ ಜೊತೆ ನಟಿಸಿದ `ಸಿಕಂದರ್’ ಸಿನಿಮಾ ಜೂನ್ 20ಕ್ಕೆ ಕುಬೇರ ಸಿನಿಮಾ ತೆರೆಕಂಡಿದೆ. ಆದರೆ ರಶ್ಮಿಕಾ ಬಗ್ಗೆ ಚರ್ಚೆ ಇಲ್ಲ. ಈ ಬೆಳವಣಿಗೆಯಿಂದ ರಶ್ಮಿಕಾ ಸಂಭಾವನೆ ಕಮ್ಮಿ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿರುವ ಮುಂದಿನ ಸಿನಿಮಾಗಳು ಹೇಳಿಕೊಳ್ಳುವ ಹಾಗಿಲ್ಲ. ಹೀಗಾಗಿ ರಶ್ಮಿಕಾ ಸಿನಿಮಾಗಳಿಗೆ ಸಂಭಾವನೆಯನ್ನ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
—-





Be the first to comment