ಹಿಂದೂ ದೇವತೆ ವೇಷ ಧರಿಸಿ ಕೀಳುಮಟ್ಟದ ಅಭಿನಯ

ಭಾರತೀಯ ಮೂಲದ ರ‍್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಅವರ ಹೊಸ ವೀಡಿಯೊ ‘ಟ್ರೂ ಬ್ಲೂ’ ವೈರಲ್ ಆದ ನಂತರ ತೀವ್ರ ಟೀಕೆ ಎದುರಿಸುತ್ತಿದೆ.

ವೀಡಿಯೊದಲ್ಲಿ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ನೀಲಿ ದೇಹದ ಬಣ್ಣ, ಚಿನ್ನದ ಆಭರಣಗಳು ಮತ್ತು ಕೆಂಪು ಬಿಂದಿಯೊಂದಿಗೆ ಹಿಂದೂ ದೇವತೆ ಕಾಳಿಯ ವೇಷ ಧರಿಸಿದ್ದು, ಕ್ರಿಶ್ಚಿಯನ್ ಶಿಲುಬೆಯನ್ನು ಬಳಸಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಡಿಯೊದಲ್ಲಿ ಜೆನೆಸಿಸ್ ಶಿಲುಬೆಯನ್ನು ನೆಕ್ಕುವುದು, ಅದನ್ನು ಎದೆಯ ಮೇಲಿಟ್ಟುಕೊಂಡು ಪೋಸ್ ನೀಡುವುದನ್ನು ಕಾಣಬಹುದು. ಈ ದೃಶ್ಯ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರನ್ನು ಅಸಮಾಧಾನಗೊಳಿಸಿದೆ. ಇದನ್ನು ‘ದೇವದೂಷಣೆ’ ಎಂದು ನೆಟ್ಟಿಗರು ಕರೆದಿದ್ದಾರೆ. ಉದ್ದೇಶಪೂರ್ವಕವಾಗಿ ಧಾರ್ಮಿಕ ಸಮುದಾಯಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಭಾರತೀಯ  ಹಿಂದೂ ಭಾವನೆಗಳನ್ನು ನೋಯಿಸಲು ಉದ್ದೇಶಪೂರ್ವಕವಾಗಿ ಅಗ್ಗದ ತಂತ್ರ ಬಳಸಿದ್ದಾರೆ  ಎಂದು ಆರೋಪಿಸಿದ್ದಾರೆ.

ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ಕೆನಡಾದ ವ್ಯಾಂಕೋವರ್‌ನಲ್ಲಿ ಜನಿಸಿದ್ದು ತಮಿಳು ಮತ್ತು ಸ್ವೀಡಿಷ್ ಹಿನ್ನೆಲೆಯಿಂದ ಬಂದವರು.  ದಿಟ್ಟ ಶೈಲಿಗೆ ಹೆಸರುವಾಸಿಯಾದ ಗಾಯಕಿ ಆಗಾಗ್ಗೆ ಪ್ರಚೋದನಕಾರಿ ಹಾಡುಗಳೊಂದಿಗೆ ಬರುತ್ತಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!