ಸಿನಿಮಾಗಳಲ್ಲಿ ತನ್ನ ಕ್ರಿಯೇಟಿವ್ ವರ್ಕ್ ಮೂಲಕ ಊಹಿಸದ ಲೋಕಕ್ಕೆ ಕರೆದೊಯ್ಯುವ ಕನಸುಗಾರ ವಿ.ರವಿಚಂದ್ರನ್ ತನ್ನ ಮುದ್ದಿನ ಮಗಳ ಮದುವೆ ತಯಾರಿಯಲ್ಲಿದ್ದಾರೆ. ಕೇವಲ ಆಹ್ವಾನ ಪತ್ರಿಕೆ ಮೂಲಕ ಕ್ಯೂರಿಯಾಸಿಟಿ ಸೃಷ್ಟಿಸಿದ್ದ ರವಿಮಾಮ, ತನ್ನ ಮಗಳ ಮದುವೆಗೆ ಭರ್ಜರಿಯಾಗಿಯೇ ತಯಾರಿ ಮಾಡಿದ್ದಾರೆ. ನನ್ನ ಮಗಳ ಮದುವೆಯನ್ನ ಅದ್ಭುತವಾಗಿಯೇ ಮಾಡುತ್ತೇನೆ. ಅದಕ್ಕಾಗಿ ಸಾಕಷ್ಟು ತಲೆ ಹಾಗು ಪ್ರೀತಿ ಖರ್ಚು ಮಾಡ್ತಿದ್ದೀನಿಯೇ ಹೊರತು ದುಡ್ಡು ಖರ್ಚು ಮಾಡುತ್ತಿಲ್ಲ ಅಂತಾ ಹೇಳ್ತಾರೆ ಕ್ರೇಜಿಸ್ಟಾರ್.
ರವಿಚಂದ್ರನ್ ಸಿನಿಮಾದಲ್ಲಿ ಬರುವ ಪ್ರತಿ ಸೀನ್ಗಳ ಪ್ರತಿ ಫ್ರೇಮ್ ಕೂಡಾ ಹೊಸದಾಗಿರುತ್ತೆ. ಯಾಕೆಂದ್ರೆ ಅವರು ಯೋಚನಾ ಲಹರಿಯೇ ಅಂತಹದ್ದು. ಇನ್ನು ಸಾಂಗ್ ಕೇಳ ಬೇಕಾ? ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಇದೀಗ ಅವರು ಸಿನಿಮಾ ರೀತಿಯೇ ಮಗಳ ಮದುವೆ ಮಾಡಲಿದ್ದಾರೆ. ಮದುವೆ ತಯಾರಿ ಕುರಿತಂತೆ ಮಾತನಾಡಿರುವ ಅವರು, ಶ್ರೀಪಾದ್ ಆಹ್ವಾನ ಪತ್ರಿಕೆ ಕ್ರಾಫ್ಟ್ ವರ್ಕ್ ಮಾಡಿದ್ದಾರೆ. ನಾನು ಕೇವಲ ನನ್ನ ತಲೆ ಖರ್ಚು ಮಾಡಿದ್ದೇನೆ. ಮದುವೆಯಲ್ಲಿ ಗಾಜಿನಿಂದ ಸ್ಟೇಜ್ ಹಾಕ್ತೀನಿ. ಇದಕ್ಕಾಗಿ 25 ದಿನ ಸ್ಟೇಜ್ ಡೆಕೋರೆಷನ್ ಮಾಡ್ತಿದ್ದೀನಿ. ಅಲ್ಲದೇ, ಒಂದೆಡೆ ಆರ್ಟ್ ವರ್ಕ್ ಕೂಡಾ ನಡೀತಿದೆ. ನಾನು ಹಾಕೋ ಸೆಟ್ ನೋಡಿದ್ರೆನೇ ಎಲ್ಲಾ ಒಂದು ಕ್ಷಣ ಕುತ್ಕೊಂಡು ಬೀಡ್ತಾರೆ! ಆ ತರಹದ ಸೆಟ್ ನಿರ್ಮಾಣ ಮಾಡ್ತೀನಿ. 27 ಬೆಳಗ್ಗೆ 5 ಗಂಟೆಯಿಂದ ಶಾಸ್ತ್ರಗಳು ಶುರುವಾಗುತ್ತವೆ. ಮದುವೆ ದಿನ ನನ್ನ ಮಗಳು ಗ್ರೀನ್ ಕಲರ್ ಮತ್ತು ಬ್ಲ್ಯಾಕ್ ಕಲರ್ ಗೌನ್ ಹಾಕ್ತಾರೆ. ಬೆಳಗ್ಗೆ ಸೀರೆ ಉಡುತ್ತಾರೆ. ನಾನು ರಿಸೆಪ್ಶನ್ನಲ್ಲಿ ಸೂಟ್ ಹಾಕ್ತೀನಿ, ಮರು ದಿನ ಪಂಚೆ ಹಾಕುತ್ತೇನೆ ಅಂತಾ ರವಿಮಾಮ ತಿಳಿಸಿದ್ರು.
Pingback: Company details