ಮಿನರ್ವಮಿಲ್‍ನಲ್ಲಿ ‘ಜಲ್ಲಿಕಟ್ಟು’

ಬೀರೇಶ್ವರ ಫಿಲಂ ಕಂಬೈನ್ಸ್ ಲಾಂಛನದಲ್ಲಿ ಭುವನ್ ಸುರೇಶ್ ಅವರು ನಿರ್ಮಿಸುತ್ತಿರುವ `ಜಲ್ಲಿಕಟ್ಟು` ಚಿತ್ರಕ್ಕಾಗಿ ಆಲ್ವಿನ್ ಅವರು ಬರೆದಿರುವ `ಸೂಪರ್ ಮಗಾ ನಮ್ಮ ಅಣ್ಣಾ ಸೂಪರೂ` ಎಂಬ ಹಾಡಿನ ಚಿತ್ರೀಕರಣ ಮಿನರ್ವಮಿಲ್‍ನಲ್ಲಿ ನಡೆದಿದೆ. ಕಿರಿಕ್ ಕೀರ್ತಿ, ಶೋಭ್‍ರಾಜ್, ಪ್ರಭುಸೂರ್ಯ, ಭರತ್, ನಿತೀಶ್ ಅಭಿನಯಿಸಿದ ಈ ಹಾಡಿಗೆ ನಾಗೇಶ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದರೊಂದಿಗೆ `ಜಲ್ಲಿಕಟ್ಟು` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಕನಕಪುರ, ಮಂಡ್ಯ, ಮಂಗಳೂರು, ತಮಿಳುನಾಡು ಗಡಿಭಾಗ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಆಲ್ವಿನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀರೇಶ್ ಅವರ ಛಾಯಾಗ್ರಹಣವಿದೆ.ವಿಶ್ವ ಸಂಕಲನ, ನಾಗೇಶ್ ನೃತ್ಯ ನಿರ್ದೇಶನ ಹಾಗೂ ವೈಲೆಂಟ್ ವೇಲು ಅವರ ಸಾಹಸ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಭುಸೂರ್ಯ, ನಿತೇಶ್, ಶ್ವೇತ, ನಿಖಿತ, ಕಿರಿಕ್ ಕೀರ್ತಿ, ಶೋಭ್‍ರಾಜ್, ಕರಾಟೆ ರಾಜ, ಮಜಾಟಾಕೀಸ್ ಪವನ್, ಉಗ್ರಂ ರವಿ, ಭರತ್, ಶುಚೀಂದ್ರ ಪ್ರಸಾದ್, ಸಂಗೀತ ಮುಂತಾದವರಿದ್ದಾರೆ.

This Article Has 1 Comment
  1. Pingback: lulusan sma untuk cpns 2021

Leave a Reply

Your email address will not be published. Required fields are marked *

Translate »
error: Content is protected !!