‘ಬಾಹುಬಲಿ’ ಒಂದೇ ಭಾಗದಲ್ಲಿ ರೀ-ರಿಲೀಸ್

ರಾಜಮೌಳಿ ನಿರ್ದೇಶನ ಮಾಡಿದ ‘ಬಾಹುಬಲಿ’ ಚಿತ್ರ ಒಂದೇ ಭಾಗದಲ್ಲಿ ಅಕ್ಟೋಬರ್​ನಲ್ಲಿ  ತೆರೆಗೆ ಬರಲಿದೆ.

‘ಬಾಹುಬಲಿ’  ರಿಲೀಸ್ ಆಗಿ ಜುಲೈ ತಿಂಗಳಿಗೆ   10 ವರ್ಷ ಕಳೆಯಲಿದೆ. ನಿಮಾದ ನಿರ್ಮಾಪಕ ಶೋಭು ಯರ್ಲಗಡ್ಡ ಅವರು ಅಧಿಕೃತವಾಗಿ ಸಿನಿಮಾ ರೀ-ರೀಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡೂ ಭಾಗವನ್ನು ಸೇರ್ಪಡೆ ಮಾಡಿ ರಿಲೀಸ್ ಮಾಡಲು ಉದ್ದೇಶಿಸಲಾಗಿದೆ.  ಎರಡೂ ಭಾಗದಲ್ಲಿ ಒಂದಷ್ಟು ವರ್ಷನ್​ಗಳನ್ನು ಟ್ರಿಮ್ ಮಾಡಲು ಆಲೋಚನೆ ನಡೆದಿದೆ.

ಅಕ್ಟೋಬರ್ 23ರಂದು ಪ್ರಭಾಸ್ ಜನ್ಮದಿನ. ಆ ಸಂದರ್ಭದಲ್ಲಿ ಚಿತ್ರವನ್ನು ರೀ-ರಿಲೀಸ್ ಮಾಡಲು ಸಿದ್ಧತೆ ನಡೆದಿದೆ. ‘ಬಾಹುಬಲಿ’ ಚಿತ್ರ  ಈವರೆಗೆ ರೀ-ರಿಲೀಸ್ ಆಗಿಲ್ಲ.

ಬಾಹುಬಲಿ’ ಹಾಗೂ ‘ಬಾಹುಬಲಿ 2’ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಗಮನ ಸೆಳೆದವು. ಚಿತ್ರದಲ್ಲಿ ವಿಎಫ್​ಎಕ್ಸ್ ಹೈಲೈಟ್ ಆಗಿತ್ತು.  ಈಗ ಸಿನಿಮಾ ಒಂದೇ ಭಾಗದಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ಜನರು ಇದನ್ನು ಇಷ್ಟ ಪಡೋ ಸಾಧ್ಯತೆ ಇದೆ. ಒಂದೇ ಭಾಗದಲ್ಲಿ ಎರಡೂ ಚಿತ್ರವನ್ನು ತೋರಿಸುವುದು ಒಳ್ಳೆಯ ತಂತ್ರ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಭಾಸ್, ಅನುಷ್ಕಾ ಶೆಟ್ಟಿ , ತಮನ್ನಾ, ಸತ್ಯರಾಜ್ ಮೊದಲಾದವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!