ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ -2’ ಚಿತ್ರ ಜೂನ್ 6ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಮತ್ತೆ ತೆರೆ ಕಾಣಲಿದೆ.
ಚಿತ್ರಕ್ಕೀಗ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಜೋಡಿಸಲಾಗಿದ್ದು ಜೂನ್ 6ರಂದು ಹೊಸ ವರ್ಷನ್ ನಲ್ಲಿ ಚಿತ್ರ ರಿಲೀಸಾಗುತ್ತಿದೆ. ಈಗಾಗಲೇ ಚಿತ್ರ ನೋಡಿದ ಗಣ್ಯರು ಚಿತ್ರದ ಕಂಟೆಂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾಯಕನಟ ಶ್ರೀನಗರ ಕಿಟ್ಟಿ, ‘ಚಿತ್ರ ಈಗ ವೇಗ ಪಡೆದುಕೊಂಡಿದೆ. ತಂದೆ- ಮಗಳ ಸೆಂಟಿಮೆಂಟ್ ಸೀನ್ ಸೇರಿದಂತೆ ಹೊಸದಾಗಿ ಸೇರಿಸಲಾಗಿರುವ 21 ನಿಮಿಷಗಳ ಹೃದಯಸ್ಪರ್ಷಿ ದೃಶ್ಯಗಳು ಪ್ರೇಕ್ಷಕರ ಮನಸನ್ನು ಭಾರವಾಗಿಸುತ್ತವೆ. ಕವಿರಾಜ್ ಬರೆದ ಚಿತ್ರದ ಕೊನೆಯ ಹಾಡನ್ನು ಶಿವಣ್ಣ ಬಿಡುಗಡೆ ಮಾಡಿದ್ದಾರೆ. ಜನರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದೆ. ಎಂದು ಹೇಳಿದ್ದಾರೆ.
ರೇಶ್ಮೆ ಉದ್ಯಮದ ಸಾಧಕ- ಬಾಧಕಗಳನ್ನು ಹಿನ್ನೆಲೆಯಾಗುಟ್ಟುಕೊಂಡು ಅದ್ಭುತ ಪ್ರೇಮಕಥೆಯನ್ನು ನಾಗಶೇಖರ್ ಕಟ್ಟಿಕೊಟ್ಟಿದ್ದಾರೆ. 2011ರಲ್ಲಿ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಬಂದಿತ್ತು. ಆದರೆ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಕಥೆಯೇ ಬೇರೆ. ಇದು ಸೀಕ್ವೆಲ್ ಅಲ್ಲ.
‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ನಿರ್ಮಾಪಕರು ಕುಮಾರ್. ಶ್ರೀಧರ್ ವಿ.ಸಂಭ್ರಮ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಾಗಿಣಿ, ಚೇತನ್, ರಂಗಾಯಣ ರಘು, ತಬಲಾ ನಾಣಿ, ಸಂಪತ್ ಕುಮಾರ್ ಮುಂತಾದವರು ನಟಿಸಿದ್ದಾರೆ.
—-

Be the first to comment