ವಿಶ್ವ ವಿಖ್ಯಾತ ಕಾನ್ ಫಿಲಂ ಫೆಸ್ಟಿವಲ್ ನಲ್ಲಿ ಕನ್ನಡದ `ಡೇವಿಡ್` ಚಿತ್ರ ಪ್ರದರ್ಶನವಾಗುತ್ತಿದೆ ಎಂದು ನಿರ್ದೇಶಕ ಭಾರ್ಗವ್ ಯೋಗಂಭರ್ ತಿಳಿಸಿದ್ದಾರೆ.
ಮರ್ಡರ್ ಮಿಸ್ಟರಿ ಕಥಾ ಹಂದರ ಹೊಂದಿರುವ ಈ ಚಿತ್ರದ ವಲ್ಡ್ ಪ್ರೀಮಿಯರ್ ಪ್ರತಿಷ್ಟಿತ ಕಾನ್ ಫಿಲಂ ಫಿಲಂ ಫೆಸ್ಟಿವಲ್ನಲ್ಲಿ ಆಗುತ್ತಿರುವುದು ನನಗೆ ಹಾಗೂ ಚಿತ್ರತಂಡಕ್ಕೆ ಅತೀವ ಸಂತಸ ತಂದಿದೆ ಎನ್ನುತ್ತಾರೆ ನಿರ್ದೇಶಕ ಭಾರ್ಗವ್. ಕಾನ್ ಫಿಲಂ ಫೆಸ್ಟಿವಲ್ನಲ್ಲಿ ಈ ಬಾರಿ ಮೇ14 ರಿಂದ 25ರವರೆಗೂ ನಡೆಯಲಿದೆ. ಮಹಾನಂದಿ ಪ್ರೋಡಕ್ಷನ್ ಲಯನ್ಸ್ ಗ್ರೂಫ್ಸ್ ಹಾಗೂ ಡಾರ್ಲಿಂಗ್ ಫಿಲಂ(ಆಸ್ಟ್ರೇಲಿಯಾ) ಲಾಂಚನದಲ್ಲಿ ಪ್ರಸಾದ್ ರುದ್ರಮುನಿ, ಪ್ರದೀಪ್, ಉಮೇಶ್, ಸ್ಟೀವ್ ರೈಸ್, ಸೈಲಜ, ಬಾಲಸುಬ್ರಮಣ್ಯ ಹಾಗೂ ದೇವ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.ಶ್ರೇಯಸ್ ಚಿಂಗ(ರಂಗ್ಬಿರಂಗ್ ಖ್ಯಾತಿ), ಅವಿನಾಶ್ ಯಳಂದೂರು, ಹರೀಶ್, ಬುಲೇಟ್ ಪ್ರಕಾಶ್, ರಾಕೇಶ್ ಅದಿಗ, ಕಾವ್ಯ ಶಾ, ನವ್ಯ ರಮೇಶ್, ಪ್ರತಾಪ್ ನಾರಾಯಣ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಳಿವುದ್ನ ಸ್ಟೀವ್ ರೈಸ್ ಹಾಗೂ ದೇವ ಅವರ ಛಾಯಾಗ್ರಹಣ, ಸಿದ್ಧಾರ್ತ್ ಹಾಗೂ ಮುಖೇಶ್ ಅವರ ಸಂಕಲನ ಈ ಚಿತ್ರಕ್ಕಿದೆ.
Be the first to comment