ಕಮಲ್‌ ವಿರುದ್ಧ ಕನ್ನಡಿಗರ ಕಿಡಿ

ಉಳಗನಾಯಗನ್‌ ಕಮಲ್‌ ಹಾಸನ್‌ ಕನ್ನಡ ಭಾಷೆ ಬಗ್ಗೆ ಅವರು ಹೇಳಿರುವ ಮಾತು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಮಲ್‌ ಹಾಸನ್‌- ಮಣಿರತ್ನಂ ಜೋಡಿ 30 ವರ್ಷದ ಬಳಿಕ ʼಥಗ್ ಲೈಫ್‌‌ʼಗಾಗಿ ಕೈ ಜೋಡಿಸಿದ್ದಾರೆ. ಈ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ಈ ಸಿನಿಮಾದ ಪ್ರಚಾರದಲ್ಲಿ ಕಮಲ್‌ ಹಾಸನ್‌, ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂಬ ಹೇಳಿದ್ದು ಕಮಲ್‌ ಈ ಮಾತಿಗೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಮೊನ್ನೆ ಚೆನ್ನೈನಲ್ಲಿ ಅದ್ಧೂರಿಯಾಗಿ ಥಗ್ಸ್‌ ಲೈಫ್‌ ಆಡಿಯೋ ಲಾಂಚ್‌ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದಲ್ಲಿ  ಶಿವಣ್ಣ ಭಾಗಿಯಾಗಿದ್ದರು. ಕಮಲ್‌ ಹಾಸನ್‌ ಅವರ ದೊಡ್ಡ ಅಭಿಮಾನಿ ಎಂದ ಶಿವಣ್ಣ, ಅವರಿಗಾಗಿ ಹಾಡು ಹೇಳಿ ಅಭಿಮಾನಿಗಳನ್ನು ರಂಜಿಸಿದರು.

ಕಾರ್ಯಕ್ರಮದಲ್ಲಿ  ಕಮಲ್‌ ಹಾಸನ್‌, ಅಣ್ಣಾವ್ರ ಜೊತೆಗಿನ ಒಡೆನಾಟದ ಬಗ್ಗೆ ಮನಬಿಚ್ಚಿ ಮಾತನಾಡಿದರು. ”ನನ್ನ ‘ರಾಜ ಪಾರ್ವೈ’ ಚಿತ್ರಕ್ಕೆ ಕ್ಲಾಪ್ ಮಾಡಿ ರಾಜ್‌ಕುಮಾರ್   ಶುಭ ಕೋರಿದ್ದರು. ಬೆಂಗಳೂರಿನಲ್ಲಿ ‘ಪುಷ್ಪಕ ವಿಮಾನ’ ಸಿನಿಮಾ ಆರಂಭಿಸಿದಾಗ ಅದಕ್ಕೂ ಅವ್ರೇ ಕ್ಲಾಪ್ ಮಾಡಿದ್ದರು. ಇದು ಆ ಊರಿನಲ್ಲಿರುವ ನನ್ನ ಕುಟುಂಬ. ಅದಕ್ಕಾಗಿ ಶಿವಣ್ಣ ಇಲ್ಲಿ ಬಂದಿದ್ದಾರೆ. ತಮಿಳಿನಿಂದ ಹುಟ್ಟಿದ್ದು ನಿಮ್ಮ ಭಾಷೆ(ಕನ್ನಡ). ಹೀಗಾಗಿ ನೀವು ಅದರಲ್ಲಿ ಒಂದು” ಎಂದು ಕಮಲ್‌ ಹೇಳಿದರು.

ಮಲ್ ಹೇಳಿಕೆ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಿದೆ. ‘ತಮಿಳು, ಕನ್ನಡದ ಮೂಲವಲ್ಲ. ತಮಿಳಿಗಿಂತಲೂ ಬಹಳ ಹಳೆಯ ಭಾಷೆ ಕನ್ನಡ’ ಎಂದು ಕನ್ನಡಿಗರು ಕಾಮೆಂಟ್ ಮಾಡುತ್ತಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!