ಶ್ರೀಧರ್ ನಾಯಕ್ ನಿಧನ

ಜೀ ಕನ್ನಡದ ‘ಪಾರು’‌ ಧಾರಾವಾಹಿ, ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’  ಸಿನಿಮಾದಲ್ಲಿ ನಟಿಸಿದ್ದ  ಶ್ರೀಧರ್ ನಾಯಕ್ ನಿಧನರಾಗಿದ್ದಾರೆ.

ಅವರಿಗೆ 47 ವರ್ಷ ವಯಸ್ಸಾಗಿತ್ತು. ತೀವ್ರ ಅನಾರೋಗ್ಯದಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಅವರ ಕಳೆಬರಹವನ್ನು ಇಡಲಾಗಿದೆ.

ಶ್ರೀಧರ್ ನಾಯಕ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.  ಶ್ರೀಧರ್ ನಾಯಕ್ ಆರ್ಥಿಕ ಪರಿಸ್ಥಿತಿ  ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಸಹಾಯಕ್ಕಾಗಿ ನೆರವನ್ನು ಕೋರಿದ್ದರು. ಕಿರುತೆರೆ ತಾರೆಯರು ಹಾಗೂ ಜನರು ನೆರವನ್ನು ನೀಡಿದ್ದರು.

ಕೋವಿಡ್ ಸಂದರ್ಭದಲ್ಲಿ ಶ್ರೀಧರ್   ಅವರಿಗೆ ಕೆಲಸವಿಲ್ಲದೆ ಆರ್ಥಿಕ ಸಮಸ್ಯೆ ಎದುರಾಗಿತ್ತು. ಇನ್ನೊಂದು ಕಡೆ ಕೌಟುಂಬಿಕ ಸಮಸ್ಯೆ  ಇತ್ತು.  ಹೀಗಾಗಿ ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟವಾಗುತ್ತಿತ್ತು ಎಂದು ಹೇಳಿಕೊಂಡಿದ್ದರು. ಊಟ ಸರಿಯಾಗಿ ಮಾಡದೆ ದೇಹದಲ್ಲಿ ವಿಟಮಿನ್ ಹಾಗೂ ಪ್ರೋಟಿನ್ ಕಡಿಮೆಯಾಗಿತ್ತು. ಇದರಿಂದ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಯ್ತು ಎಂದು ಸ್ವತ: ಶ್ರೀಧರ್  ಹೇಳಿಕೊಂಡಿದ್ದರು.

‘ವಧು’ ಸೀರಿಯಲ್‌ ಶೂಟಿಂಗ್ ಮಾಡುವಾಗ ಶ್ರೀಧರ್‌ ಆರೋಗ್ಯವಾಗಿ  ಇದ್ದರು. ಏಕಾಏಕಿ ಅವರಿಗೆ ಇನ್‌ಫೆಕ್ಷನ್‌ ಕಾಣಿಸಿಕೊಂಡಿತು. ಹೀಗಾಗಿ ‘ವಧು’ ಸೀರಿಯಲ್‌ ಗೆ  ಶ್ರೀಧರ್‌ ಗುಡ್‌ ಬೈ ಹೇಳಿದರು. ಬ್ಯಾಪಿಸ್ಟ್ ಆಸ್ಪತ್ರೆ ಸೇರಿದ ಬಳಿಕ ಗುರುತೇ ಸಿಗದಷ್ಟು ಬದಲಾದರು. ಕೃಶವಾಗಿ ಹೋದರು. ಆರ್ಥಿಕವಾಗಿ ಅವರು ಸದೃಢರಾಗಿರಲಿಲ್ಲ. ದಿನಕ್ಕೆ ರೂ.15,000 ಖರ್ಚಾಗುತ್ತಿತ್ತು. ದುಡಿದ ಹಣವೆಲ್ಲ ಆಸ್ಪತ್ರೆಯ ವೆಚ್ಚಕ್ಕೆ ಖರ್ಚಾದಾಗ ಸಹಾಯಕ್ಕಾಗಿ ಅವರು ಅಂಗಲಾಚಿದ್ದರು.

ಶ್ರೀಧರ್ ‘ಪಾರು’, ‘ವಧು’, ‘ಮಂಗಳ ಗೌರಿ’, ‘ಮನೆಯೇ ಮಂತ್ರಾಲಯ’ ಸೇರಿದಂತೆ 40ಕ್ಕೂ ಹೆಚ್ಚು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.  ಅವರು ಕೆಲವು ತಮಿಳು ಸಿನಿಮಾಗಳಲ್ಲಿ ನಟಿಸಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!