ಸಿಂಪಲ್ ಸುನಿ ನಿರ್ದೇಶನದ ‘ರಿಚಿ ರಿಚ್’ ಚಿತ್ರದಲ್ಲಿನಾಯಕಿಗಾಗಿ ಶಾನ್ವಿ ಶ್ರೀವಾಸ್ತವ ಮತ್ತು ಅಮೃತಾ ಅಯ್ಯಂಗಾರ್ ಅವರನ್ನು ಸಂಪರ್ಕಿಸಲಾಗಿದೆ ಎಂದು ತಿಳಿದು ಬಂದಿದೆ.
ಎವಿಆರ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಅರವಿಂದ್ ವೆಂಕಟೇಶ್ ರೆಡ್ಡಿ ನಿರ್ಮಿಸುತ್ತಿರುವ ‘ರಿಚಿ ರಿಚ್’ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ವಿಜೇತ ಕಾರ್ತಿಕ್ ಮಹೇಶ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಶಾನ್ವಿ ಶ್ರೀವಾಸ್ತವ ಮತ್ತು ಅಮೃತಾ ಅಯ್ಯಂಗಾರ್ ಅವರನ್ನು ಸಂಪರ್ಕಿಸಲಾಗಿದೆ. ಚಿತ್ರದಲ್ಲಿ ಅವರು ನಟಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ.
ಶಾನ್ವಿ ಶ್ರೀವಾಸ್ತವ ಇತ್ತೀಚೆಗೆ ನಾಗತಿಹಳ್ಳಿ ಚಂದ್ರಶೇಖರ್ ಅವರ ‘ಅಮೆರಿಕಾ ಅಮೆರಿಕಾ 2’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಅಮೃತಾ ಅಯ್ಯಂಗಾರ್, ಕೃಷ್ಣ ಜೊತೆ ನಟಿಸಿರುವ ಫಾದರ್ ಚಿತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.
‘ರಿಚಿ ರಿಚ್’ ಚಿತ್ರವು ಮಧ್ಯಮ ವರ್ಗದ ನಾಯಕನೊಬ್ಬನ ಸಂಪತ್ತಿನ ಅನ್ವೇಷಣೆಯ ಸುತ್ತ ಸುತ್ತುತ್ತದೆ. ಕಾರ್ತಿಕ್ ಮಹೇಶ್ ಅವರು ರಿದ್ದೇಶ್ ಚಿನ್ನಯ್ಯ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಿಚಿ ರಿಚ್ ಚಿತ್ರದಲ್ಲಿ ಸೂಪರ್ ಮಾಡೆಲ್ ಆಯೇಷಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ರಿಚಿ ರಿಚ್‌ಗೆ ವೀರ್ ಸಮರ್ಥ್ ಸಂಗೀತ ನೀಡಲಿದ್ದಾರೆ ಮತ್ತು ಅಭಿಲಾಷ್ ಕಲಾಟ್ಟಿ ಛಾಯಾಗ್ರಹಣ ಮಾಡಲಿದ್ದಾರೆ.

Be the first to comment