‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಟ ಮಡೆನೂರು ಮನು ಸಹ ಕಲಾವಿದೆ ಮೇಲೆ ಅತ್ಯಾಚಾರ, ಗರ್ಭಪಾತ, ಹಲ್ಲೆ ಆರೋಪದಡಿ ಅರೆಸ್ಟ್ ಆಗಿದ್ದಾನೆ.
ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನುವನ್ನು ಹಾಸನ ಬಳಿಯ ಶಾಂತಿಗ್ರಾಮದ ಬಳಿ ಗುರುವಾರ ಬಂಧಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ ಹಲವು ರಹಸ್ಯಗಳನ್ನು ಮನು ಬಾಯ್ಬಿಟ್ಟಿದ್ದಾನೆ. ‘ಅದು ಅತ್ಯಾಚಾರ ಅಲ್ಲ, ಒಪ್ಪಂದದ ಸಂಪರ್ಕ. ನಟಿ ಇಬ್ಬರು ಹೀರೋ, ಒಬ್ಬಳು ಲೇಡಿ ಡಾನ್ ಮಾತು ಕೇಳಿ ದೂರು ದಾಖಲಿಸಿದ್ದಾಳೆ. ಲೇಡಿ ಡಾನ್ ನಟಿಗೆ ಆಪ್ತಳು. ಕಾಮಿಡಿ ಕಿಲಾಡಿಗಳು ಶೋ ನಟಿ’ ಎಂದು ಮನು ಮಾಹಿತಿ ನೀಡಿದ್ದಾರೆ.
‘ಸಿನಿಮಾ ಹಾಳು ಮಾಡಲೆಂದೇ ಆ ಮೂವರು ಪ್ಲ್ಯಾನ್ ಮಾಡಿದ್ದಾರೆ. ನಾನು ನಟಿಗೆ ಹಿಂಸೆ ನೀಡಿಲ್ಲ. ಆಕೆಯೇ ನನಗೆ ತೊಂದರೆ ಕೊಡ್ತಿದ್ದಾಳೆ’ ಎಂದು ಮನು ಪ್ರತ್ಯಾರೋಪ ಮಾಡಿದ್ದಾನೆ. ತನ್ನ ಬಳಿಯಿರುವ ಸಾಕ್ಷ್ಯಗಳನ್ನು ಪೊಲೀಸರಿಗೆ ನೀಡಿದ್ದಾನೆ.
‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಮನು ಹಾಗೂ ಸಂತ್ರಸ್ತ ಯುವತಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಯುವತಿ ಜೊತೆಗೆ ಆಪ್ತತೆ ಬೆಳೆಸಿಕೊಂಡಿದ್ದ ಮನುಗೆ ಈ ಮೊದಲೇ ಮದುವೆ ಆಗಿ ಒಂದು ಮಗು ಇದೆ ಎನ್ನಲಾಗಿದೆ.
ಆರೋಪಗಳಿಗೆ ಫೇಸ್ ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ ಮಡೆನೂರು ಮನು, ‘ಹರಿದಾಡ್ತಿರೋ ವಿಚಾರದ ಬಗ್ಗೆ ಸಾಕ್ಷಿ ಸಮೇತ ಕ್ಲಾರಿಟಿ ಕೊಡುತ್ತೇನೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದನ್ನು ಹೇಳುತ್ತೇನೆ. ಸಿನಿಮಾ ನಿಲ್ಲಿಸ್ಬೇಕು ಅಂತ ಒದ್ದಾಡ್ತಿದಾರೆ. ಈ ಸಿನಿಮಾ ಪ್ರಮೋಷನ್ ನೋಡಿ ಯಾರೆಲ್ಲ ನನಗೆ ಬೆದರಿಕೆ ಹಾಕ್ತಿದಾರೆ ಎಂಬುದನ್ನು ಸಾಕ್ಷಿ ಸಮೇತ ತೋರಿಸುತ್ತೇನೆ. ಕಷ್ಟಪಟ್ಟು ಸಿನಿಮಾ ಮಾಡಿದೀವಿ. ಸಿನಿಮಾಗೆ ಯಾವುದೇ ತೊಂದರೆ ಆಗಬಾರದು’ ಎಂದು ಹೇಳಿದ್ದಾನೆ.
ಮಡೆನೂರು ಮನು ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದು, ಈ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ.
—-

Be the first to comment