ಆಂಕರ್ ಅನುಶ್ರೀ ಮದುವೆ ಆಗುವ ಹುಡುಗನ ಬಗ್ಗೆ ಕೊತ್ತಲವಾಡಿ ಚಿತ್ರದ ಟೀಸರ್ ರಿಲೀಸ್ ಕಾರ್ಯಕ್ರಮದಲ್ಲೂ ಚರ್ಚೆ ಆಗಿದೆ.
ಅನುಶ್ರೀ ಮದುವೆ ಆಗುವ ಹುಡುಗನ ಬಗ್ಗೆ ಅನೇಕ ವದಂತಿಗಳಿವೆ. ಆದರೆ ನಿಖರವಾದ ಮಾಹಿತಿ ಹೊರ ಬಿದ್ದಿಲ್ಲ. ಆಗಾಗ ಕೆಲವು ನಟರು, ನಿರ್ದೇಶಕರ ಜೊತೆ ಅನುಶ್ರೀ ಡೇಟಿಂಗ್ ಎಂದು ಸುಳ್ಳು ವದಂತಿ ಹರಡುತ್ತದೆ. ಆದರೆ ಅನುಶ್ರೀ ಅವರೇ ಖುದ್ದಾಗಿ ತಮ್ಮ ಹುಡುಗನನ್ನ ಎಲ್ಲಿಯೂ ಪರಿಚಯಿಸಿಲ್ಲ. ಯಾರನ್ನ ಮದುವೆ ಆಗ್ತೀನಿ ಅಂತಾನೂ ಹೇಳಿಲ್ಲ. ಅನುಶ್ರೀ ನಾನು ಈ ವರ್ಷ ಮದುವೆ ಆಗುವೆ ಎಂದು ಮಾತ್ರ ಹೇಳಿದ್ದು ಮದುವೆ ವದಂತಿ ವಿಚಾರದ ಬಗ್ಗೆ ಯಶ್ ಅಮ್ಮ ಪುಷ್ಪಾ ಅರುಣ್ ಕುಮಾರ್ ಮಾತನಾಡಿದ್ದಾರೆ.
ಕೊತ್ತಲವಾಡಿ ಪ್ರೆಸ್ ಮೀಟ್ ನಲ್ಲಿ ಕಾರ್ಯಕ್ರಮ ನಿರೂಪಿಸುತ್ತಿದ್ದ ಅನುಶ್ರೀ ಅವರ ಮದುವೆ ವಿಚಾರ ಬಂದೇ ಬಿಡ್ತು. ಎಲ್ಲರೂ ನನ್ನ ಮದುವೆ ಬಗ್ಗೆ ಯೋಚನೆ ಮಾಡ್ತಾರೆ. ಮಳೆನೂ ಬರ್ತಿದೆ. ಈ ವರ್ಷನಾದ್ರೂ ಮದುವೆ ಆಗ್ಲಪ್ಪ ಎಂದು ಅನುಶ್ರೀ ತಮಾಷೆ ದಾಟಿಯಲ್ಲಿ ಹೇಳುತ್ತಿದ್ದರು.
ಯಶ್ ತಾಯಿ ಪುಷ್ಪಾ ಅರುಣ್‌ಕುಮಾರ್, ಅನುಶ್ರೀ ಮದುವೆ ಮಾಡುವುದಾಗಿ ವೇದಿಕೆ ಮೇಲೆಯೇ ಎಲ್ಲರ ಮುಂದೆ ಹೇಳಿದ್ದಾರೆ. ತಮಾಷೆಯಾಗಿಯೇ ಮಾತು ಶುರು ಮಾಡಿದ ಪುಷ್ಪಾ ಅರುಣ್‌ಕುಮಾರ್, ಈಗಾಗಲೇ ಎರಡು ಮದುವೆ ಮಾಡಿದ್ದೀನಿ. ಮೂರನೇ ಮದುವೆ ಮಾಡೋದಿಲ್ಲವಾ? ಖಂಡಿತಾ ನಿಮ್ಮ ಮದುವೆ ಮಾಡ್ತೀನಿ ಎಂದು ಪುಷ್ಪಾ ಅರುಣ್‌ಕುಮಾರ್ ಹೇಳಿದರು.
ನನ್ನ ಮದುವೆಯನ್ನ ಯಶ್ ತಾಯಿ ಮಾಡ್ತಾರಂತೆ. ಮನೆಗೆ ಬರ್ತೀನಿ ಅಮ್ಮ ಎಂದು ತಮಾಷೆಯಾಗಿಯೇ ಅನುಶ್ರೀ ಹೇಳಿದರು.
—–

Be the first to comment