ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಪಟ್ಟಂತೆ ದರ್ಶನ್, ಪವಿತ್ರಗೌಡ ಬೆಂಗಳೂರಿನ 57ನೇ CCH ಕೋರ್ಟ್ಗೆ ಇಂದು ಹಾಜರಾಗಿದ್ದಾರೆ.
ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಲಾಗಿದೆ. ಜುಲೈ 10ಕ್ಕೆ ಎಲ್ಲರೂ ಹಾಜರಾಗುವಂತೆ ಬೆಂಗಳೂರಿನ 57ನೇ CCH ಕೋರ್ಟ್ ಸೂಚನೆ ಕೊಟ್ಟಿದೆ. ಕಳೆದ ಬಾರಿ ಬೆನ್ನು ನೋವಿನ ನೆಪ ಹೇಳಿ ಕೋರ್ಟ್ ಗೆ ದರ್ಶನ್ ಗೈರಾಗಿದ್ದರು. ಕೋರ್ಟ್ ಖಡಕ್ ವಾರ್ನಿಂಗ್ ಬೆನ್ನಲ್ಲೇ ದರ್ಶನ್ ಈ ಬಾರಿ ಕೋರ್ಟ್ ಗೆ ಹಾಜರಾಗಿದ್ದಾರೆ. ನ್ಯಾಯಾಲಯಕ್ಕೆ ಇಂದು ಎಲ್ಲಾ 17 ಆರೋಪಿಗಳು ಹಾಜರಾಗಿದ್ದರು.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ಪಡೆದರೂ ಪ್ರತಿ ತಿಂಗಳು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಷರತ್ತು ಹಿನ್ನೆಲೆಯಲ್ಲಿ ಎಲ್ಲರೂ ಕೋರ್ಟ್ಗೆ ಹಾಜರಾಗಿದ್ದಾರೆ.
ಕೋರ್ಟ್ನ ವಿಚಾರಣೆ ಮುಗಿದ ನಂತರ ಕೋರ್ಟ್ನಿಂದ ದರ್ಶನ್ ಹೊರಬಂದು ಲಿಫ್ಟ್ ಸೇರಿಕೊಂಡರು. ಆಗ ಹಿಂದಿನಿಂದ ಓಡಿಕೊಂಡು ಬಂದು ದರ್ಶನ್ ಇರುವ ಲಿಫ್ಟ್ನೊಳಗೆ ಹೋದ ಪವಿತ್ರಾ ಗೌಡ ದರ್ಶನ್ ಕೈ ಹಿಡಿದುಕೊಂಡು ಫೋನ್ ನಂಬರ್ ಕೊಡುವಂತೆ ಕೇಳಿದರು. ದರ್ಶನ್ ಪವಿತ್ರಾ ಮೊಬೈಲ್ ಪಡೆದು ಅದರಲ್ಲಿ ತನ್ನ ಹೊಸ ನಂಬರ್ ಡಯಲ್ ಮಾಡಿಕೊಟ್ಟರು. ಈ ದೃಶ್ಯವು ಕೋರ್ಟ್ ವಲಯದಲ್ಲಿ ಭಾರೀ ಗಮನ ಸೆಳೆಯಿತು.
ಈಗಾಗಲೇ ದೇಶಾದ್ಯಂತ ಸಂಚರಿಸಲು ಅನುಮತಿಯನ್ನು ಪಡೆದಿರುವ ದರ್ಶನ್ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ನಿನ್ನೆ ದರ್ಶನ್ ಮತ್ತು ವಿಜಯಲಕ್ಷ್ಮಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
—–

Be the first to comment