SWCL

ಸ್ಯಾಂಡಲ್ ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್-SWCL ಶುರು

ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು ಎಂಬ ಒಳ್ಳೆ ಧ್ಯೇಯವನ್ನು ಇಟ್ಕೊಂಡು ಚಿತ್ರರಂಗದಲ್ಲಿ ಹೊಸ ಕ್ರಿಕೆಟ್ ಟೂರ್ನಮೆಂಟ್ ಪ್ರಾರಂಭಿಸಲಾಗಿದೆ. ಅದುವೇ ಸ್ಯಾಂಡಲ್ ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್. ಹೆಸರೇ ಹೇಳುವಂತೆ ಇದು ಮಹಿಳಾ ಕ್ರಿಕೆಟ್ ಪಂದ್ಯಾವಳಿ.

ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸ್ಯಾಂಡಲ್ ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್-SWCL ಸುದ್ದಿಗೋಷ್ಟಿ ಏರ್ಪಡಿಸಲಾಗಿತ್ತು. ನಟ ರಾಜ್ ಬಿ ಶೆಟ್ಟಿ ಹಾಗೂ ಟೂರ್ನಮೆಂಟ್ ಬ್ರ್ಯಾಂಡ್ ಅಂಬಾಸಿಡರ್ ಆದ ತಾರಾ ಅನುರಾಧ, ಶೃತಿ, ಅನು ಪ್ರಭಾಕರ್ ಹಾಗೂ ಪ್ರಿಯಾಂಕ ಉಪೇಂದ್ರ ಭಾಗಿಯಾಗಿದ್ದರು. ಈ ಟೂರ್ನಮೆಂಟ್ ಸಂಸ್ಥಾಪಕ ಪೀಟರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಾರಾ ಅನುರಾಧ , ಎಲ್ಲಾ ಹೆಣ್ಣುಮಕ್ಕಳು ಸೇರಿದ್ರೆ ಲಕ್ಷ್ಮಿಯರು ಸೇರಿದ ರೀತಿ. ನನಗೆ ಡಾಕ್ಟರೇಟ್ ಬಂದಾಗ ಎಲ್ಲ ಹೆಣ್ಣುಮಕ್ಕಳನ್ನು‌ ನಮ್ಮ‌ ಮನೆಯಲ್ಲಿ ಸೇರಿಸಿ ಕಾರ್ಯಕ್ರಮ ಮಾಡಿದ್ದೆ. ಅದು ಪೀಟರ್ ಗೆ ಸ್ಫೂರ್ತಿ ಕೊಟ್ಟಿತ್ತು. ಆಗ ಹೆಣ್ಣು‌ ಮಕ್ಕಳೆಲ್ಲರನ್ನೂ ಸೇರಿಸಿ ಏನಾದರೂ ಮಾಡೋಣಾ ಅಂತಿದ್ದ. ಸಿನಿಮಾ ಮಾಡು ಬೆಸ್ಟ್ ಎಂದಿದ್ದೆ. ಅಷ್ಟು ಬಜೆಟ್ ಇಲ್ಲ ಎಂದಿದ್ದ. ಈ ರೀತಿ ಸೃಷ್ಟಿಯಾದ ಕಾರ್ಯಕ್ರಮ ಇದು. ಎಲ್ಲ ಹಿರಿಯ ಕಲಾವಿದರ ಹೆಸರಿನಲ್ಲಿ ಟೀಂ ಮಾಡಿದ್ದಾರೆ. ಇದು ಖುಷಿಯಾಯ್ತು. ನಮಗೆ ಸಿನಿಮಾ ಬಿಟ್ರೆ ಬೇರೆ ಏನು ಗೊತ್ತಿಲ್ಲ. ಕ್ರಿಕೆಟ್ ನನಂತೂ ಆಡಿಲ್ಲ. ಜೂನ್ ತಿಂಗಳಲ್ಲಿ ಈ ಕ್ರಿಕೆಟ್ ಪಂದ್ಯ ಶುರುವಾಗಲಿದೆ‌ ಎಂದು ತಿಳಿಸಿದರು.

SWCL

Swcl ಸಂಸ್ಥಾಪಕ ಪೀಟರ್ ಮಾತನಾಡಿ, ನಾನು ಕನ್ನಡ ಸಿನಿಮಾಗಳನ್ನು ದುಬೈನಲ್ಲಿ ರಿಲೀಸ್ ಮಾಡಬೇಕು ಎಂಬ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ಕಾರಣ ರಾಕ್ ಲೈನ್ ವೆಂಕಟೇಶ್ ಸರ್. ಅವರು ನಾನು ನಿಮ್ಮ ಜೊತೆ ಇದ್ದೇನೆ ಎಂದು ಸಪೋರ್ಟ್ ಮಾಡಿದರು. ಕಾಟೇರ್ ಚಿತ್ರವನ್ನು ಗಲ್ಫ್ ನಲ್ಲಿ ರಿಲೀಸ್ ಮಾಡಲು ಅವಕಾಶ ಕೊಟ್ಟರು. ಅದು ದೊಡ್ಡ ಯಶಸ್ಸು ಆಯ್ತು. ಈಗ ಹಳೆ ದಿಗ್ಗಜ ಕಲಾವಿದರಿಗೆ ಹೆಸರಿನಲ್ಲಿ ಟೀಂ ಮಾಡಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದ್ದೇವೆ. ದುಬೈನಲ್ಲಿ ಪಂದ್ಯಗಳು ನಡೆಯಲಿವೆ. ಇದು ಅಲ್ಲಿನ ಆಡಿಯನ್ಸ್ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಪ್ರಚಾರ ರೀತಿ ಆಗುತ್ತದೆ. ಈ ಮೂಲಕ ಅಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡಬೇಕು ಎಂಬ ಯೋಚನೆ ಇದೆ‌ ಎಂದರು.

ಸ್ಯಾಂಡಲ್ ವುಡ್ ವುವೆನ್ಸ್ ಸೆಲೆಬ್ರಿಟಿ ಲೀಗ್-SWCL ಕರ್ತೃ ಪೀಟರ್. ಇವರ ಸಾರಥ್ಯದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, ಅವರದ್ದೇ ಬ್ಯಾನರ್ ಓವರ್ ಸೀಸನ್ ಎಂಟರ್ ಟೈನ್ಮೆಂಟ್ ಈ ಪಂದ್ಯವನ್ನು ಪ್ರೆಸೆಂಟ್ ಮಾಡಲಿದೆ. ದುಬೈನಲ್ಲಿ ಟೂರ್ನಮೆಂಟ್ ‌ಏರ್ಪಡಿಸಿರುವುದು ವಿಶೇಷ. SWCLನ ಟ್ರಾವೆಲ್ ಪಾಟ್ನರ್ ಆಗಿ Easy2trip ಸಾಥ್‌ ಕೊಡಲಿದೆ.

SWCL

ತಂಡಗಳು ಯಾವುವು?

  1. ಪಾರ್ವತಮ್ಮ ರಾಜ್‍ಕುಮಾರ್
  2. ಲೀಲಾವತಿ
  3. ಜಯಂತಿ
  4. ಕಲ್ಪನಾ
  5. ಮಂಜುಳಾ

ಬ್ರ್ಯಾಂಡ್ ಅಂಬಾಸಿಡರ್ ಯಾರು?

ತಾರಾ ಅನುರಾಧಾ, ಮಾಲಾಶ್ರೀ, ಶೃತಿ,‌ ಅನು ಪ್ರಭಾಕರ್ ಹಾಗೂ ಪ್ರಿಯಾಂಕಾ ಉಪೇಂದ್ರ ಬ್ರ್ಯಾಂಡ್ ಅಂಬಾಸಿಡರ್ ಆಗಿ ತಂಡಗಳನ್ನು‌ ಮುನ್ನಡೆಸಲಿದ್ದಾರೆ.

ಹೀಗೆ ಹಿರಿಯ ಕಲಾವಿದರ ಹೆಸರಿನಲ್ಲಿ ಟೀಂ ಮಾಡಿದ್ದಾರೆ. ಒಟ್ಟು ಐದು ತಂಡಗಳಿದ್ದು, ಐದು ತಂಡಗಳ ಕ್ಯಾಪ್ಟನ್, ಬ್ರ್ಯಾಂಡ್ ಅಂಬಾಸಿಡರ್ ಯಾರು? ಸ್ಪಾನ್ಸರ್ ಯಾರು? ಅನ್ನೋದನ್ನು ಮುಂದಿನ ದಿನಗಳಲ್ಲಿ ತಿಳಿಸಿಕೊಡಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!