ಕಿರು ಚಿತ್ರ ದಿ ವಾರಿಯರ್ಸ್

ಪ್ರಚಲಿತ ತಾಂತ್ರಿಕ ಬದುಕಿನಲ್ಲಿ ಜನರು ಇತರರ ಕಷ್ಟಕ್ಕೆ ಸ್ಪಂದಿಸದೇ ಸ್ವಾರ್ಥದಿಂದ ಬದುಕುತ್ತಿದ್ದಾರೆ. ಏನೇ ಕಹಿ ಘಟನೆ ನಡೆದರೂ ಅದರ ಬಗ್ಗೆ ಚರ್ಚೆ ನಡೆಸಿ, ನಂತರ ತಮ್ಮದೆ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಇಂತಹುದೆ ಅಂಶವನ್ನು ಒಳಗೊಂಡ ಹದಿನೈದು ನಿಮಿಷದ ‘ದಿ ವಾರಿಯರ್ಸ್’ ಎನ್ನುವ ಕಿರುಚಿತ್ರವೊಂದು ಸಿದ್ದಗೊಂಡಿದೆ. ಕಳೆದ ತಿಂಗಳು ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಒಂದು ಏಳಯನ್ನು ತೆಗೆದುಕೊಳ್ಳಲಾಗಿದೆ. ಕಟ್ಟಡದಲ್ಲಿ ಸಿಲುಕಿ ಪಾರಾಗಿ ಬಂದವರನ್ನು ಶೀರ್ಷಿಕೆಗೆ ಹೋಲಿಸಲಾಗಿದೆ. ಶುದ್ದಿ ಮತ್ತು ಭಿನ್ನ ಚಿತ್ರಗಳನ್ನು ನಿರ್ದೇಶನ ಮಾಡಿರುವ ಆದರ್ಶ್.ಹೆಚ್. ಈಶ್ವರಪ್ಪ ಕತೆ,ಚಿತ್ರಕತೆ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಇವರಿಗೆ ಸಹಾಯಕರಾಗಿ ಪ್ರಸಾದ್‍ಚಲ್‍ಕಡಿ ಕೆಲಸ ಮಾಡಿದ್ದಾರೆ. ಟೆಂಟ್ ಸಿನಿಮಾದ ವಿದ್ಯಾರ್ಥಿಗಳು ಸಿನಿಮಾದಲ್ಲಿ ನಟನೆ ಮಾಡಿರುವುದು ವಿಶೇಷ. ಸಿಂಕ್ ಸೌಂಡ್ ಬಳಸಿ ಒಂದೂವರೆ ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ವೀಕ್ಷಣೆ ಮಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೆಗೌಡ ಮಾತನಾಡಿ ತರಭೇತಿ ಶಾಲೆಯಿಂದ ಅಭಿನಯ, ನಿರ್ದೇಶನ, ಸಂಭಾಷಣೆ, ತಾಂತ್ರಿಕ ವಿಭಾಗಗಳಲ್ಲಿ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಯುವಜನಾಂಗದವರಲ್ಲಿ ವಿದ್ಯೆ ಇರೋಕಡೆ ಯೋಚನೆ ಇರುತ್ತದೆಂದು ಅಭಿಪ್ರಾಯಪಟ್ಟರು.

ಶರೀರ-ಶಾರೀರವನ್ನು ಹೇಗೆ ಬಳಸಬೇಕು. ಸಿದ್ದಾಂತ ಹೇಳಿಕೊಡುವುದಲ್ಲದೆ, ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಲು ಸಂಸ್ಥೆಯಿಂದ ಇಂತಹ ಚಿತ್ರಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಅವರುಗಳು ಪರಿಪೂರ್ಣರಾಗುತ್ತಾರೆಂದು ಸಂಸ್ಥಾಪಕರಾದ ನಾಗತ್ತಿಹಳ್ಳಿ ಚಂದ್ರಶೇಖರ್ ವ್ಯಾಖ್ಯಾನ ನೀಡಿದರು. ಶಬ್ದ ನಿರ್ವಹಣೆ ನಿಥುನ್‍ಲುಕೋಸೆ, ಸಂಗೀತ ಸುಚಿತ್.ಎಸ್.ಹೆಚ್.ರಾಜಗೋಪಾಲ್, ಛಾಯಾಗ್ರ್ರಹಣ ಗೋಕುಲ್‍ಪಿಳ್ಳೈ ಅವರದಾಗಿದೆ. ತಂಡಕ್ಕೆ ಶುಭ ಹಾರೈಸಲು ವಸಿಷ್ಟಸಿಂಹ, ಸುಮನ್‍ನಗರ್‍ಕರ್, ಗೌರೀಶ್‍ಅಕ್ಕಿ ಮುಂತಾದವರು ಹಾಜರಿದ್ದರು. ಸದರಿ ಚಿತ್ರವನ್ನು ಯುಟ್ಯೂಬ್‍ನಲ್ಲಿ ಅಳವಡಿಸಲಾಗಿದೆ.

This Article Has 1 Comment
  1. Pingback: DevSecOps services

Leave a Reply

Your email address will not be published. Required fields are marked *

Translate »
error: Content is protected !!