ಭಾನುವಾರ ‘ವಿಶ್ವ ತಾಯಂದಿರ ದಿನ’. ಅದಕ್ಕೂ ಮುನ್ನದಿನ ‘ಸಾಗುತ ದೂರ ದೂರ’ ಚಿತ್ರದಲ್ಲಿ ರಚನಾಸ್ಮಿತ್ ಸಾಹಿತ್ಯ, ಗಾಯನದ ಅಮ್ಮನ ಕುರಿತಾದ ಹಾಡನ್ನು ಬಿಡುಗಡೆ ಮಾಡಲು ತಂಡವು ಯೋಜನೆ ರೂಪಿಸಿಕೊಂಡಿದ್ದರು. ಗೀತೆಯನ್ನು ಅನಾವರಣಗೊಳಿಸಲು ಆಗಮಿಸಿದ್ದ ಅನುಪ್ರಭಾಕರ್‍ಗೆ ಅಚ್ಚರಿ ಕಾದಿತ್ತು. ನಿರೂಪಕಿ ಶುರು ಮಾಡುತ್ತಾ, ಮೇಡಂ ಅವರ ಕಟ್ಟಾ ಅಭಿಮಾನಿ ದೂರದ ಊರಿನಿಂದ ಬಂದಿರುವುದಾಗಿ, ಅವರಿಗೆ ನಿಮ್ಮ ಜೊತೆ ಸೆಲ್ಪಿ ತೆಗೆದುಕೊಳ್ಳುವ ಅದಮ್ಯ ಬಯಕೆ ಇದೆ ಎಂದು ಕೋರಿಕೊಂಡರು. ಇದಕ್ಕೆ ಸಮ್ಮತಿಸಿ ಯಾರಿರಬಹುದೆಂದು ಸೋಜಿಗದಿಂದ ಸಭಾಂಗಣದತ್ತ ಕಣ್ಣು ಹರಿಸಿದರು. ಆಹ್ವಾನಿತರ ಮಧ್ಯದಿಂದ ಬುರ್ಖ ಹಾಕಿಕೊಂಡ ಮಹಿಳೆಯೊಬ್ಬರು ನಿಧಾನವಾಗಿ ವೇದಿಕೆ ಹತ್ತಿರ ಬರುವಾಗಲೇ, ಓಹ್ ಇದು ನಮ್ಮಮ್ಮ ಅಂತ ಪ್ರೀತಿಯಿಂದ ಕೂಗಿಕೊಂಡು ಕೆಳಗಿಳಿದು ಗಟ್ಟಿಯಾಗಿ ಅಪ್ಪಿಕೊಂಡರು. ನಂತರ ಮಾತನಾಡುತ್ತಾ ಮಗಳು ಅಜ್ಜಿಯ ಜೊತೆ ಮಾತನಾಡದಿದ್ದರೆ ಇಬ್ಬರಿಗೂ ಸಮಾಧಾನವಾಗುವುದಿಲ್ಲ. ಅಮ್ಮನಿಗೆ ಇವತ್ತು ಚಿತ್ರೀಕರಣ ಇರುವ ಕಾರಣ ಭೇಟಿ ಮಾಡಲಾಗಲಿಲ್ಲ. ದೇವರ ದಯೆಯಿಂದ ಇಲ್ಲಿಗೆ ಬಂದಿದ್ದಾರೆ. ಇವತ್ತು ಏನೇ ಆಗಿದ್ದರೂ ಅದಕ್ಕೆ ಅಮ್ಮನೇ ಕಾರಣವೆಂದು ಭಾವುಕರಾದರು.
ಮಗಳ ಮಾತಿಗೆ ಖುಷಿಗೊಂಡ ಗಾಯಿತ್ರಿಪ್ರಭಾಕರ್ ಕಣ್ಣಿಗೆ ಗ್ಲಿಸಿರನ್ ಹಾಕಿಕೊಂಡು ನಟಿಸುವ ದೃಶ್ಯದಲ್ಲಿ ಬ್ಯುಸಿ ಇದ್ದೆ. ನಿರ್ದೆಶಕರು ಇದರ ಪರಿಕಲ್ಪನೆ ಹೇಳಿದಾಗ ಅವಳನ್ನು ನೋಡಬೇಕೆಂಬ ಬಯಕೆಯಿಂದ ದೇವನಹಳ್ಳಿಯಿಂದ ಬಂದಿರುವೆನೆಂದು ಹೇಳಿದರು. ಸಿನಿಮಾದಲ್ಲಿ ಗೀತೆಯು ರ್ಯಾಪ್ ಮಾದರಿಯಲ್ಲಿ ಮೂಡಿಬಂದಿದ್ದು, ಹರಿಣಿ ಅಮ್ಮನಾಗಿ ನಟಿಸಿದ್ದಾರೆ. ಬದುಕಿದ್ದಾಗ ತಾಯಿ ಬೆಲೆ ತಿಳಿಯುವುದಿಲ್ಲ. ಅವರು ಹೋದಾಗ ಫೋಟೋ ಹಾಕಿ ಪೂಜೆ ಮಾಡುವುದರಲ್ಲಿ ಯಾವ ಅರ್ಥವು ಇರುವುದಿಲ್ಲ್ಲ ಎಂಬುದು ಲಹರಿವೇಲು ತೂಕದ ಮಾತಾಗಿತ್ತು.
ಕಲಾವಿದರಾದ ಅಪೇಕ್ಷಾಪುರೋಹಿತ್, ಜಾನ್ವಿಜ್ಯೋತಿ, ಮಹೇಶ್‍ಸಿದ್ದಿ, ಮಾಸ್ಟರ್ ಆಶಿಕ್, ದೀಕ್ಷಿತ್‍ಶೆಟ್ಟಿ, ಕುಮಾರ್‍ನವೀನ್,ರಚನೆ, ನಿರ್ದೇಶನ ರವಿತೇಜ, ಸಂಗೀತ ಕದ್ರಿಮಣಿಕಾಂತ್ ಮುಂತಾದವರು ಉಪಸ್ತಿತರಿದ್ದು ಸಂತಸ ಹಂಚಿಕೊಂಡರು. ಅಮಿತ್‍ಪೂಜಾರಿ ನಿರ್ಮಾಣ ಮಾಡಿರುವ ಚಿತ್ರವು ಮುಂದಿನ ತಿಂಗಳು ತೆರೆ ಕಾಣುವ ಸಾದ್ಯತೆ ಇದೆ.
Pingback: portal sscasn 2021