ವೇದಿಕೆ ಮೇಲೆ ಕುಸಿದು ಬಿದ್ದ ವಿಶಾಲ್

ತಮಿಳು ನಟ  ವಿಶಾಲ್‌  ನಿನ್ನೆ ವಿಲ್ಲುಪುರಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಕುಸಿದು ಬಿದಿದ್ದಾರೆ.

ಅವರನ್ನು ತಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.  ಸದ್ಯ ವಿಶಾಲ್ ಆರೋಗ್ಯವಾಗಿದ್ದು ಆತಂಕ ಪಡುವ ಅಗತ್ಯ ಇಲ್ಲ ಎಂದು ವಿಶಾಲ್‌  ಅವರ ಮ್ಯಾನೇಜರ್ ಹರಿ ಹೇಳಿದ್ದಾರೆ.

ಭಾನುವಾರ ಮಧ್ಯಾಹ್ನ ವಿಶಾಲ್ ಊಟ ಮಾಡಿರಲಿಲ್ಲ. ಕೇವಲ ಜ್ಯೂಸ್ ಮಾತ್ರ ಕುಡಿದಿದ್ದರು. ಇದರಿಂದ ಆಯಾಸಗೊಂಡು ಅವರು ಪ್ರಜ್ಞೆ ಕಳೆದುಕೊಂಡಿದ್ದರು.  ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ  ನೀಡಿದ್ದಾರೆ ಎಂದು ಹರಿ ಹೇಳಿದ್ದಾರೆ.

ಜನವರಿ ತಿಂಗಳಲ್ಲಿ ನಡೆದ ‘ಮದಗಜರಾಜ’ ಚಿತ್ರದ ಪ್ರಚಾರ ಕಾರ್ಯದಲ್ಲಿ ವಿಶಾಲ್‌ ಅವರನ್ನು ನೋಡಿ ಅಭಿಮಾನಿಗಳು ದಂಗಾಗಿದ್ದರು . ವಿಶಾಲ್ ಮಾತನಾಡುವಾಗ ತೊದಲಿ,  ಕೈ ನಡುಗಿದ್ದು ಇದನ್ನು ಕಂಡು ವಿಶಾಲ್ ಫ್ಯಾನ್ಸ್ ಆಘಾತಗೊಂಡಿದ್ದರು.‌ ಬಳಿಕ ವೈರಲ್‌ ಫೀವರ್‌ನಿಂದ ಆ ರೀತಿ ಆಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದವು.

ಆರೋಗ್ಯ ಚೇತರಿಸಿಕೊಂಡ ಬಳಿಕ ವಿಶಾಲ್‌ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮದಲ್ಲಿ ಭಾಗಿಯಾಗಿದ್ದರು  ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ನೋಡಿದ್ದರು.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!