ನಟ, ರ್ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ಎರಡನೇ ಮದುವೆಗೆ ಸಿದ್ದ ಎಂದಿದ್ದಾರೆ.
ಖಾಸಗಿ ಸಂದರ್ಶನದೊಂದರಲ್ಲಿ ಚಂದನ್ ಶೆಟ್ಟಿ, ನನಗೂ ಹೀಗೆ ಏಕಾಂಗಿಯಾಗಿ ಬದುಕಲು ಇಷ್ಟ ಇಲ್ಲ. ಸರಿಯಾದ ಹುಡುಗಿ ಸಿಕ್ಕರೆ ನಾನು ಮದುವೆಯಾಗಲು ಸಿದ್ದ . ಎಲ್ಲ ತಂದೆ ತಾಯಿಯರಿಗೆ ಇರುವಂತೆ ನನ್ನ ತಂದೆ ತಾಯಿಗೆ ಕೂಡ ನನ್ನ ವಿಚಾರದಲ್ಲಿ ಕಾಳಜಿ ಇದ್ದೇ ಇದೆ. ನಾನು ಮದುವೆಯಾಗಬೇಕು. ಜೀವನದಲ್ಲಿ ಮುಂದಕ್ಕೆ ಹೋಗಬೇಕೆನ್ನುವ ಆಸೆ ಇದೆ ಎಂದು ಹೇಳಿದ್ದಾರೆ.
ನಿವೇದಿತಾ ಗೌಡರಿಂದ ವಿಚ್ಛೇದನ ಪಡೆದ ‘ಸಲಗ’ ಸಿನಿಮಾ ನಾಯಕಿ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸ್ವತಃ ಸಂಜನಾ ಆನಂದ್, ಚಂದನ್ ನನ್ನ ಸಹೋದರ ಇದ್ದಂತೆ ಎಂದು ವದಂತಿಗೆ ಗುನ್ನ ಹೊಡೆದಿದ್ದರು.
ವಿಚ್ಛೇದನ ಪಡೆದ ಬಳಿ ಚಂದನ್ ಶೆಟ್ಟಿ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಸೂತ್ರಧಾರಿ’ ಸಿನಿಮಾ ಬಿಡುಗಡೆಯಾಗಿದೆ. ಚಂದನ್ ಶೆಟ್ಟಿ -ನಿವೇದಿತಾ ಗೌಡ ಒಟ್ಟಿಗೆ ನಟಿಸಿರುವ ‘ಮುದ್ದು ರಾಕ್ಷಿಸಿ’ ಸಿನಿಮಾ ರಿಲೀಸ್ ಗೆ ಸಿದ್ದವಾಗಿದೆ.
—–

Be the first to comment