ಸಲಗ ಶೂಟಿಂಗ್ ಶುರು..!

ದುನಿಯಾ ವಿಜಯ್ ನಟನೆಯ ‘ಸಲಗ’ ಸಿನಿಮಾದ ಚಿತ್ರೀಕರಣ ಇದೇ ಜೂನ್ 6ರಿಂದ ಶುರುವಾಗಲಿದೆ. ಚಿತ್ರದಲ್ಲಿ ವಿಜಯ್ ಪಕ್ಕಾ ಮಾಸ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್​ಗೆ ಎದುರಾಳಿಯಾಗಿ ಡಾಲಿ ಧನಂಜಯ್ ತೊಡೆ ತಟ್ಟಲಿದ್ದಾರೆ. ಈಗಾಗಲೇ ಚಿತ್ರದ ಕಥೆ ಕುತೂಹಲ ಮೂಡಿಸಿದ್ದು ನಿರ್ದೇಶಕರು ಯಾರು ಅನ್ನೋದು ರಿವೀಲ್ ಆಗಬೇಕಿದೆ.ಇನ್ನು ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದು ಸಿನಿಮಾಗೆ ಇಬ್ಬರು ಸಂಗೀತ ನಿರ್ದೇಶಕರಿದ್ದಾರೆ. ಹಿನ್ನೆಲೆ ಸಂಗೀತವನ್ನು ಚರಣ್‌ ರಾಜ್‌ ನೀಡಿದರೆ, ಹಾಡುಗಳಿಗೆ ನವೀನ್‌ ಸಜ್ಜು ಟ್ಯೂನ್‌ ಹಾಕಲಿದ್ದಾರೆ. ಇತ್ತೀಚೆಗಷ್ಟೇ ಟಗರು ಚಿತ್ರತಂಡ ಸಲಗ ಟೀಂ ಸೇರಿತ್ತು. ಒಟ್ಟಿನಲ್ಲಿ ವಿಜಯ್‌ ಮತ್ತು ಶ್ರೀಕಾಂತ್‌ ಈ ವರ್ಷ ಟಗರು ಥರಹದ ಮತ್ತೊಂದು ಬ್ಲಾಕ್‌ ಬಸ್ಟರ್‌ ಸಿನಿಮಾ ತೆರೆ ಮೇಲೆ ತರೋ ನಿರೀಕ್ಷೆ ಹೆಚ್ಚಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!