‘ಕಾಜಿ’ಕಿರುಚಿತ್ರ ಸತೀಶ್​ ಆಡಿಯೋ ಕಂಪೆನಿಯಿಂದ ಬಿಡುಗಡೆ

ನಟ ನಿನಾಸಂ ಸತೀಶ್​ ಈಗ ನಟನೆಯ ಜೊತೆಗೆ ಸತೀಶ್​ ಪಿಕ್ಚರ್​ ಹೌಸ್​ನಿಂದ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಸತೀಶ್ ಆಡಿಯೋ ಹೌಸ್​ ಅನ್ನೋ ಆಡಿಯೋ ಕಂಪೆನಿಯನ್ನು ಆರಂಭಿಸಿದ್ದಾರೆ. ಅಂದ್ಹಾಗೆ ತಮ್ಮ ಸಂಸ್ಥೆಯಿಂದ ಅಮ್ಮಂದಿರ ದಿನಕ್ಕೆ ಸತೀಶ್ ಸ್ಪೆಷಲ್​ ಗಿಫ್ಟ್ ನೀಡುತ್ತಿದ್ದಾರೆ. ನಟಿ ಐಶಾನಿ ಶೆಟ್ಟಿ ನಿರ್ದೇಶನದ ‘ಕಾಜಿ’ ಸಿನಿಮಾನಾ ಸತೀಶ್​ ಬಿಡುಗಡೆ ಮಾಡ್ತಿದ್ದು, ತಮ್ಮ ಆಡಿಯೋ ಕಂಪೆನಿಯಿಂದ ಬಿಡುಗಡೆ ಆಗುತ್ತಿರುವ ಮೊದಲ ಕಿರುಚಿತ್ರ ಇದಾಗಿದೆ.

ಬರುವ ಭಾನುವಾರದಂದು ತಾಯಂದಿರ ದಿನಕ್ಕೆ ‘ಕಾಜಿ’ ರಿಲೀಸ್ ಆಗುತ್ತಿದೆ. ಅಮ್ಮಂದಿರ ದಿನಾಚರಣೆ ದಿನವೆ ರಿಲೀಸ್ ಆಗುತ್ತಿರುವುದು ಯಾಕೆ ಎನ್ನುವುದು ಕಿರು ಚಿತ್ರ ನೋಡದ ಮೇಲೆಯೆ ಗೊತ್ತಾಗಲಿದೆಯಂತೆ. ಸತೀಶ್‌ ಈ ಹಿಂದೆ 2014ರಲ್ಲಿ ಸತೀಶ್‌ ಮೀಡಿಯಾ ಹೌಸ್‌ ಹೆಸರಲ್ಲೊಂದು ನಿರ್ಮಾಣ ಸಂಸ್ಥೆ ಶುರು ಮಾಡಿದ್ದರು. ‘ಕಾಜಿ’ ಕಿರುಚಿತ್ರ ನಿರ್ಮಾಣ ಮಾಡಿದ್ದರು. ನಟಿ ಐಶಾನಿ ಶೆಟ್ಟಿ ‘ನಿರ್ದೇಶಿಸಿದ್ದರು. ಹಲವು ರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳಿಗೂ ಇದು ಸ್ಪರ್ಧೆ ಮಾಡಿತ್ತು. ಈಗಾಗಲೆ ಸಾಕಷ್ಟು ಇಂಟರ್ ನ್ಯಾಶನ್ ಫಿಲ್ಮ್ ಫೆಸ್ಟಿವಲ್ಸ್ ನಲ್ಲಿ ಭಾಗಿಯಾಗಿ ಅವಾರ್ಡ್ ಪಡೆದುಕೊಂಡಿದೆ ಕಾಜಿ. ಆದಾದ ನಂತರ ‘ ರಾಕೆಟ್‌’ ಚಿತ್ರ ನಿರ್ಮಾಣವಾಗಿ ತೆರೆ ಕಂಡಿತ್ತು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಸಿಕ್ಕಿತ್ತು.

This Article Has 1 Comment
  1. Pingback: Digital Transformation consultants

Leave a Reply

Your email address will not be published. Required fields are marked *

Translate »
error: Content is protected !!