ಅಲ್ಲು ಅರ್ಜನ್ ಜೊತೆ ಕಿಸ್ಸಿಕ್ ಎಂದು ಕುಣಿದ ಶ್ರೀಲೀಲಾ, ರಾಮ್ ಚರಣ್ ಜೊತೆ ನಟಿಸುವ ಹೊಸ ಸುದ್ದಿ ಬಂದಿದೆ.
ಬುಚ್ಚಿ ಬಾಬು ಸನಾ ನಿರ್ದೇಶನದ ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಯಕಿ ಪಾತ್ರಕ್ಕೆ ಶ್ರೀಲೀಲಾ ಅವರನ್ನೇ ಚಿತ್ರತಂಡ ಅಪ್ರೋಚ್ ಮಾಡಿತ್ತು ಎಂಬ ಸುದ್ದಿ ಇದೆ. ಆದ್ರೆ ಅದ್ಯಾವ ಕಾರಣ ಶ್ರೀಲೀಲಾ ರಿಜೆಕ್ಟ್ ಮಾಡಿದ್ರೋ ಗೊತ್ತಿಲ್ಲ. ಈಗ ಶ್ರೀಲೀಲಾ, ರಾಮ್ ಚರಣ್ ಜೊತೆ ನಟಿಸುತ್ತಿದ್ದಾರೆ. ಡ್ಯಾನ್ಸಿಂಗ್ ನಂಬರ್ಗೆ ಈ ಜೋಡಿ ಜೊತೆಯಾಗುತ್ತಿರುವ ಬಗ್ಗೆ ಗುಲ್ಲೆದಿದೆ.
ಅಲ್ಲು ಅರ್ಜುನ್ ಜೊತೆ ಕಿಸ್ಸಿಕ್ ಎಂದು ಕುಣಿದಿದ ಬಳಿಕ ಶ್ರೀಲೀಲಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಾಮ್ ಚರಣ್ ಕೂಡ ಅದ್ಭುತ ಡ್ಯಾನ್ಸರ್. ಟಾಲಿವುಡ್ಈ ಜೋಡಿ ಒಂದಾಗಿ ಹೆಜ್ಜೆ ಹಾಕಿದರೆ ಆ ಸಿಂಗಿಂಗ್ ಸೆನ್ಸೇಷನಲ್ ಆಗೋದ್ರಲ್ಲಿ ಡೌಟ್ ಬೇಡ ಅಂತಿದೆ.
ಈಗ ಬಾಲಿವುಡ್ ನಲ್ಲಿ ಬೇಜಾನ್ ಬ್ಯುಸಿಯಾದ ಶ್ರೀಲೀಲಾ ಸದ್ಯ ಆಶಿಕಿ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದಾದ ಬಳಿಕ ಮತ್ತೊಂದು ಹಿಂದಿ ಚಿತ್ರಕ್ಕೂ ಸಹಿ ಮಾಡಿರುವ ಸುದ್ದಿ ಇದೆ.

Be the first to comment