‘ರಾಜ ರಾಣಿ ರೋರರ್ ರಾಕೇಟ್’ಚಿತ್ರೀಕರಣ ಮುಕ್ತಾಯ

ಲೇಖನ ಕ್ರಿಯೇಷನ್ಸ್ ಲಾಂಛನದಲ್ಲಿ ನಾಗರಾಜ್ ಪಿ ಅಜ್ಜಂಪುರ ಶೆಟ್ಟರ್ ಅವರು ನಿರ್ಮಿಸುತ್ತಿರುವರಾಜ ರಾಣಿ ರೋರರ್ ರಾಕೇಟ್ಚಿತ್ರದಜೋಡೆತ್ತು, ಜೋಡೆತ್ತು ಒಳ್ಳೆಗತ್ತುಎಂಬ ಹಾಡಿನ ಚಿತ್ರೀಕರಣ ಚಿಕ್ಕಬಾಣಾವಾರದಲ್ಲಿ 2ದಿನಗಳ ಕಾಲ ನಡೆದಿದೆ.

ಭೂಷಣ್ ಅವರು ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುವುದರೊಂದಿಗೆ ನಟಿಸಿದ್ದಾರೆ. 150ಕ್ಕೂ ಹೆಚ್ಚು ನೃತ್ಯಗಾರರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ಹಾಡಿನ ಚಿತ್ರೀಕರಣದೊಂದಿಗೆರಾಜ ರಾಣಿ ರೋರರ್ ರಾಕೇಟ್` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

ಕೆಂಪೇಗೌಡ ಮಾಗಡಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಭೂಷಣ್ ಅಭಿನಯಿಸಿದ್ದಾರೆ. ಭೂಷಣ್ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಇವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿದ್ದ ರ್ಯಾಂಬೋ 2 ಚಿತ್ರದ ಚುಟು ಚುಟು ಹಾಡು ಜನಮನಸೂರೆಗೊಂಡಿದೆ.

ಪ್ರಖ್ಯಾತ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನವಿದೆ. eóÁ್ಞನೇಶ್ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಹಾಗೂ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‍ಕುಮಾರ್, ಮಾನ್ಯ, ಎಂ.ಡಿ.ಕೌಶಿಕ್, ಮೂಗೂರು ಸುಂದರಂ ಮುಂತಾದವರಿದ್ದಾರೆ.

This Article Has 1 Comment
  1. Pingback: Devops Companies

Leave a Reply

Your email address will not be published. Required fields are marked *

Translate »
error: Content is protected !!