ಹಿಟ್-3‌

ಬೆಂಗಳೂರಿನಲ್ಲಿ ‘ಹಿಟ್-3‌’ ಸಿನಿಮಾ ಪ್ರಚಾರ ಮಾಡಿದ ನಾನಿ

ಶೈಲೇಶ್ ಕೋಲನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ ‘ಹಿಟ್-3’ ಸಿನಿಮಾ ಮೇ1ಕ್ಕೆ ತೆರೆಗೆ ಬರ್ತಿದೆ. ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರ ಹಿಂದಿ, ಕನ್ನಡ, ತಮಿಳು ಭಾಷೆಗಳಿಗೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಪ್ರಚಾರ ಭರದ ಸಾಗುತ್ತಿದ್ದು, ಇಂದು ಬೆಂಗಳೂರಿನಲ್ಲಿ ನಾನಿ ಶ್ರೀನಿಧಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಚಿತ್ರದ ಬಗ್ಗೆ ಸಾಕಷ್ಟು ಮಾಹಿತಿ ಹಂಚಿಕೊಂಡರು.

ನಗರದ ಖಾಸಗಿ ಹೋಟೆಲ್‌ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾನಿ , ಹಿಟ್-3 ಸಿನಿಮಾ ಇನ್ನೊಂದು ದಿನದಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಂಬಿಕೆ ಇದೆ. ನಾನು ಸಿನಿಮಾ ನೋಡಿದೆ. ಅದ್ಭುತವಾಗಿ ಮೂಡಿಬಂದಿದೆ ಎಂದರು. ಇನ್ನೂ ಪಾತ್ರಗಳ ಆಯ್ಕೆ ಬಗ್ಗೆಯೂ ಮಾತನಾಡಿದ ಅವರು, ನಾನು ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಯಾವುದೇ ಜಾನರ್‌ ಗೆ ಸ್ಟಿಕ್‌ ಆಗುವುದಿಲ್ಲ. ಹೊಸದನ್ನು ಕಲಿಯಲು ಪ್ರಯತ್ನ ಮಾಡುತ್ತೇನೆ. ಶ್ರೀನಿಧಿ ಈ ಚಿತ್ರದಲ್ಲಿ ಕನ್ನಡ ಡಬ್‌ ಮಾಡಿದ್ದಾರೆ ಎಂದು ತಿಳಿಸಿದರು,

ಹಿಟ್-3‌

ಶ್ರೀನಿಧಿ ಶೆಟ್ಟಿ, ಮೇ 1ಕ್ಕೆ ಸಿನಿಮಾ ರಿಲೀಸ್‌ ಆಗುತ್ತಿದೆ. ನನ್ನ ಮೂವೀ ಸ್ವಲ್ಪ ಸಮಯ ಆದ ಬಳಿಕ ಬರುತ್ತಿದೆ. ಮೂರುವರೆ ವರ್ಷದ ಬಳಿಕ ನನ್ನನ್ನು ನಾನು ತೆರೆಮೇಲೆ ನೋಡಿಕೊಳ್ಳುತ್ತಿದ್ದೇನೆ. ನಾನು ಕೂಡ ಎಕ್ಸೈಟ್‌ ಆಗಿದ್ದೇನೆ. ಕೆಜಿಎಫ್‌, ಕೆಜಿಎಫ್ 2 ಸಿನಿಮಾಗಳಿಗೆ ನೀವು ಕೊಟ್ಟ ಸಪೋರ್ಟ್‌ ನಿಂದ ನಾನು ಸಿನಿಮಾ ಮಾಡಲಿಲ್ಲ ಅಂದಾಗಲೂ ಇದೆ. ನಾನಿ ಅವರ ಜೊತೆ ತೆಲುಗಿನಲ್ಲಿ ಸಿಕ್ಕಿರುವುದು ದೊಡ್ಡ ಭಾಗ್ಯ. ನಮ್ಮವರೂ ಅನ್ನೋ ಫೀಲ್‌ ಇದೆ. ಕಥೆ ಚೆನ್ನಾಗಿದೆ. ಎಲ್ಲರೂ ಥಿಯೇಟರ್‌ ಹೋಗಿ ಸಿನಿಮಾ ನೋಡಿ ಎಂದರು.

ಹಿಟ್ ಸರಣಿ ಸಿನಿಮಾಗಳನ್ನು ಶೈಲೇಶ್ ಕೋಲನು ನಿರ್ದೇಶನ ಮಾಡುತ್ತಾ ಬರ್ತಿದ್ದಾರೆ. 3 ಭಾಗದಲ್ಲಿ ನಾನಿ ಹೀರೊ ಐಪಿಎಸ್‌ ಅರ್ಜುನ್ ಸರ್ಕಾರ್ ಆಗಿ ಅಬ್ಬರಿಸಿದ್ದಾರೆ. ಮೃದುಲಾ ಪಾತ್ರದಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ‘ಹಿಟ್’ ಸರಣಿಯ ಹಿಂದಿನ 2 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಪಾರ್ಟ್-3 ಕುತೂಹಲ ಮೂಡಿಸಿದೆ.

ಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ‌ ಮೂಡಿ ಬಂದಿದ್ದು, ಮಿಕ್ಕಿ ಜೆ ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಹಿಟ್-3 ಚಿತ್ರಕ್ಕಿದೆ. ಬೆಂಗಳೂರು ಕುಮಾರ್‌ ಹಿಟ್‌ 3 ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.

ಹಿಟ್-3‌

Be the first to comment

Leave a Reply

Your email address will not be published. Required fields are marked *

Translate »
error: Content is protected !!