ಖನನ ಕುತೂಹಲಕ್ಕೆ ಶುಕ್ರವಾರ ತೆರೆ ಬೀಳಲಿದೆ

ಎರಡು ವರ್ಷದಿಂದ ಸುದ್ದಿಯಾಗಿದ್ದ ಕುತೂಹಲ ಕೆರಳಿಸಿದ್ದ ‘ಖನನ’ ಚಿತ್ರ ಕೊನೆಗೂ ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿದೆ. ಅಂದು ಕೊಂಡಿದ್ದೆಲ್ಲಾ ಆದರೆ ಜೀವನ ಹೇಗಾಗುತ್ತೇ. ಹನಿ ಐ ಯಾಮ್ ಹೋಮ್ ಎಂದು ಎರಡು ಬಾರಿ ಹೇಳವುದು. ಹೀಗೆ ಟ್ರೈಲರ್‍ದಲ್ಲಿ ಬರುವ ಪವರ್‍ಫುಲ್ ಡೈಲಾಗ್‍ಗಳಲ್ಲಿ ಇದು ಒಂದಾಗಿದೆ. ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ರಾಧಾ ಪ್ರಕಾರ ಸಿನಿಮಾದಲ್ಲಿ ಪಾಪ ಮಾಡುವವನಿಗೆ ಆಯಾಗಿ, ಖುಷಿಯಾಗಿರುತ್ತದೆ. ಅದು ಶಾಪವಾಗಿ ಪರಿಣಿಮಿಸಿದಾಗ ಅದರ ಪ್ರತಿಕ್ರಿಯೆ ಹೇಗಿರುತ್ತದೆ. ಕಥಾ ನಾಯಕ ವಿದೇಶದಲ್ಲಿ ಮದುವೆಯಾಗಿ ಭಾರತಕ್ಕೆ ಮರಳುತ್ತಾನೆ. ವ್ಯವಹಾರದಲ್ಲಿ ಅಪಕೀರ್ತಿ ಒದಗಿಬಂದು ಆತನ ವೃತ್ತಿ ಮೇಲೆ ಪರಿಣಾಮ ಬೀರಿದಾಗ ಅದಕ್ಕೆ ಕಾರಣ ಯಾರು? ಶ್ವಾನಪ್ರಿಯನಾಗಿದ್ದು ಅದು ಸಹ ಮಹತ್ವದ ಪಾತ್ರ ವಹಿಸಿದೆ. ಮೊದಲರ್ಧ ಇದಮಿತ್ಥಂ ಅಂದುಕೊಂಡರೆ ವಿರಾಮದ ತರುವಾಯ ಬರುವ ಅಸಲಿ ಕತೆ ಏನು ಎಂಬುದು ಕೊನೆಯಲ್ಲಿ ತಿಳಿಯಲಿದೆ. 25 ನಿಮಿಷ ಕ್ಲೈಮಾಕ್ಸ್ ಇರುವುದು ವಿಶೇಷ.ಕುಟುಂಬದವನಾಗಿ, ವೃತ್ತಿಪರ, ಪ್ರೇಮಿ, ಸೈಕ್ಸೋ, ದೇಹದಾರ್ಢ್ಯ ಪಟು, ಹೀಗೆ ಐದು ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ನಾಯಕ ಆರ್ಯವರ್ಧನ್ ಆರ್ಕಿಟೆಕ್ಟ್ ಆಗಿ ಅಭಿನಯಿಸಿದ್ದಾರೆ. ಅಗೆಯುವುದು, ಹೂಳುವುದಕ್ಕೆ ಟೈಟಲ್ ಅರ್ಥ ಕೊಡುತ್ತದೆ. ಇದರಲ್ಲಿ ಯಾರನ್ನು ಹೂಳುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಪ್ರತಿಯೊಬ್ಬರ ಜೀವನದಲ್ಲಿ ಯಾವತ್ತೋ ಒಂದು ದಿನ ಖನನ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಪರಿಸ್ಥಿತಿ ಬಂದರೆ ಏನಾಗುತ್ತದೆ ಎಂಬುದು ಒನ್ ಲೈನ್ ಸ್ಟೋರಿಯಾಗಿದೆ. ಇಂಡೋ ಅಮೇರಿಕನ್ ಹುಡುಗಿಯಾಗಿ ಅಸ್ಸಾಂನ ಕರಿಷ್ಮಾಬರುಹಾ ನೆಗಟೀವ್ ಪಾತ್ರದಲ್ಲಿ ನಾಯಕಿ. ಗುಪ್ತ,ಸುಪ್ತವಾಗಿ ಅಸೂಯೆ ಪಡುವ ಸೈಲೆಂಟ್ ದುರಳನಾಗಿ ಯುವಕಿಶೋರ್, ಪದ್ದು ಪೋಸ್ಟ್ ಮಾರ್ಟಮ್ ವೈದ್ಯನಾಗಿ ಮಹೇಶ್‍ಸಿದ್ದಿ ಇವರೊಂದಿಗೆ ಬ್ಯಾಂಕ್‍ಜನಾರ್ಧನ್-ಓಂಪ್ರಕಾಶ್‍ರಾವ್ ಹಾಸ್ಯದ ಸನ್ನಿವೇಶಗಳು ಇರಲಿದೆ.
ಕುನಿಗುಡಿಪಾಟಿ ಸಂಗೀತ, ರಮೇಶ್‍ತಿರುಪತಿ ಛಾಯಾಗ್ರಹಣ, ರವಿಕಾಂತ್ ರಚನೆ ಇದೆ. ನಟನಾಗಬೇಕೆಂದು ಪಸೆ ಹೊಂದಿದ್ದ ಬಿ.ಶ್ರೀನಿವಾಸರಾವ್‍ಗೆ ಅದು ಒಲಿದಿರುವುದಿಲ್ಲ. ಮಗನಾದರೂ ನಾಯಕನಾಗಬೇಕಂಬ ಅದಮ್ಯ ಬಯಕೆಯಿಂದ ಎಸ್.ನಲಿಗೆ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡಿದ್ದಾರೆ. ಚಿತ್ರವು ಹೇಗಾದರೂ ಜನರಿಗೆ ತಲುಪಬೇಕಂಬ ಸದುದ್ದೇಶದಿಂದ ಮುಂಗಡವಾಗಿ ಐದು ಸಾವಿರ ಟಿಕೆಟ್‍ಗಳನ್ನು ಸಿನಿಮಾಸಕ್ತರಿಗೆ ನೀಡಲು ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ತಂಡವನ್ನು ರಚಿಸಿದ್ದಾರೆ. ವಿತರಕ ವೆಂಕಟ್ ಮುಖಾಂತಾರ ಚಿತ್ರವು ಮೇ 10ರಂದು ಏಕಕಾಲಕ್ಕೆ ಮೂರು ಭಾಷೆಗಳಲ್ಲಿ ತೆರೆಗೆ ಬರಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!