38 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಚಿತ್ರ ಪ್ರದರ್ಶನ

ಕಾಶ್ಮೀರದಲ್ಲಿ 38 ವರ್ಷದ ಬಳಿಕ ಮೊದಲ ಬಾರಿಗೆ ಚಿತ್ರದ ಪ್ರದರ್ಶನವೊಂದು ನಡೆದಿದೆ.

ಬಾಲಿವುಡ್ ನಟ ಇಮ್ರಾನ್ ಹಶ್ಮಿ ಅವರ ‘ಗ್ರೌಂಡ್ ಝೀರೋ’ ಚಿತ್ರ  ಶ್ರೀನಗರದಲ್ಲಿ ಹೊಸದಾಗಿ ನಿರ್ಮಿಸಲಾದ ಐನಾಕ್ಸ್ ಚಿತ್ರಮಂದಿರದಲ್ಲಿ ವಿಶೇಷ ಪ್ರಥಮ ಪ್ರದರ್ಶನಗೊಂಡಿದೆ. ಸುಮಾರು ನಾಲ್ಕು ದಶಕಗಳಲ್ಲಿ ಕಾಶ್ಮೀರದ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಮೊದಲ ಚಿತ್ರ ಇದಾಗಿದೆ.

ದಶಕಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಅಶಾಂತಿ   ತಾಂಡವವಾಡುತ್ತಿದೆ. ಹೀಗಾಗಿ ಕಣಿವೆಯ ಜನರಿಗೆ ಸಿನಿಮಾ ಕನಸಾಗಿಯೇ ಉಳಿದಿತ್ತು.ಈ ನೆಲದಲ್ಲಿ  38 ವರ್ಷಗಳಿಂದ ಒಂದೇ ಒಂದು ಸಿನಿಮಾ ಪ್ರದರ್ಶನವಾಗಿರಲ್ಲಿಲ್ಲ. 38 ವರ್ಷಗಳ ಬಳಿಕ  ಕಾಶ್ಮೀರದಲ್ಲಿ ಬೆಳ್ಳಿ ಪರದೆಯಲ್ಲಿ ಸಿನಿಮಾ ಪ್ರದರ್ಶನ ಆರಂಭವಾಗಿದೆ.

ಇಮ್ರಾನ್ ಹಶ್ಮಿ, ನಿರ್ಮಾಪಕ ಫರ್ಹಾನ್ ಅಖ್ತರ್, ನಟಿ ಸಾಯಿ ತಮ್ಹಂಕರ್ ಮತ್ತು ಉಳಿದ ಚಿತ್ರತಂಡ  ‘ಗ್ರೌಂಡ್ ಝೀರೋ’ ಸ್ಪೆಷಲ್‌ ಸ್ಕ್ರೀನ್‌ ನಲ್ಲಿ ಭಾಗವಹಿಸಿದ್ದರು. ಈ ಕಥೆಯು ಗಡಿಯಲ್ಲಿ ಬಿಎಸ್‌ಎಫ್ ಸೈನಿಕರ ಜೀವನ ಮತ್ತು ಹೋರಾಟವನ್ನು ತೆರೆದಿಟ್ಟಿದೆ.

ತೇಜಸ್ ಪ್ರಭಾ ವಿಜಯ್ ನಿರ್ದೇಶನದ ‘ಗ್ರೌಂಡ್ ಝೀರೋ’ ಚಿತ್ರವನ್ನು ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇಮ್ರಾನ್ ಹಶ್ಮಿ ಬಿಎಸ್‌ಎಫ್ ಕಮಾಂಡರ್ ನರೇಂದ್ರ ನಾಥ್ ಧಾರ್ ಪಾತ್ರವನ್ನು ನಿರ್ವಹಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!