ರಾಕಿಂಗ್ ಸ್ಟಾರ್ ಯಶ್ ತಾರಕಕ್ಕೆ ಹೋಗಿದ್ದರೂ ಗೆಳಯರನ್ನು ಮರೆತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ‘ಸಾಗುತ ದೂರ ದೂರ’ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಆಗಮಿಸಿದ್ದರು. ದೃಶ್ಯಗಳಿಗೆ ಚಾಲನೆ ನೀಡಿದ ರಾಕಿ ಮಾತನಾಡುತ್ತಾ ಗೆಳಯ ಇಷ್ಟು ವರ್ಷ ಆದಮೇಲೆ ನಿರ್ದೇಶನ ಮಾಡಿದ್ದಾನೆ. ಟ್ರೈಲರ್‍ದಲ್ಲಿ ಸಾಕಷ್ಟು ವಿಷಯಗಳು ತುಂಬಿಕೊಂಡಿದ್ದು, ಸಿನಿಮಾ ನೋಡಲು ಪ್ರೇರಣೆಯಾಗಿದೆ. ಹೊಸ ರೀತಿಯ ಪ್ರಯತ್ನ ಸಪಲವಾಗಲಿ. ಗೆಳತನಕ್ಕಿಂತ ಮೊದಲು ಚಿತ್ರವು ಚೆನ್ನಾಗಿರಬೇಕು. ಅದಕ್ಕಾಗಿ ಇಲ್ಲಿಗೆ ಬರುವ ಮೊದಲು ತುಣುಕುಗಳನ್ನು ವೀಕ್ಷಿಸಿ ಖುಷಿ ತಂದುಕೊಟ್ಟಿತು. ಕದ್ರಿಮಣಿಕಾಂತ್ ಸಂಗೀತವನ್ನು ಇಷ್ಟಪಡಲಿದ್ದು, ಅವರು ಸಂಗೀತ ಸಂಯೋಜಿಸಿರುವುದು ಪ್ಲಸ್ ಪಾಯಿಂಟ್ ಆಗಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು.
ರಾಮ ಹುಟ್ಟಿದಾಗ ರಾವಣನು ಹುಟ್ಟಿದ್ದ. ಕೃಷ್ಣ ಹುಟ್ಟಿದಾಗ ಕಂಸನು ಜನ್ಮತಾಳಿದ್ದ. ಇವರಿಗೆ ಹೆತ್ತೋಳು ಒಬ್ಬಳೆ ತಾಯಿ. ಒಳ್ಳೇದು ಕೆಟ್ಟದ್ದು ತಾಯಿ ಇಡುವ ಹೆಸರಿನಲ್ಲಿ ಇರೋಲ್ಲ. ನಾವು ತುಳಿಯೋ ಹಾದಿಯಲ್ಲಿ ಇರುತ್ತದೆ ಎಂಬಂತಹ ಅದ್ಬುತ ಸಂಭಾಷಣೆಗೆ ಧ್ವನಿ ನೀಡಿರುವುದು ಕಂಚಿನ ಕಂಠದ ವಸಿಷ್ಟಸಿಂಹ. ಕತೆಯಲ್ಲಿ ಯುವಕ ಮತ್ತು ಹುಡುಗನೊಬ್ಬ ಯಾವುದೋ ಒಂದು ಕಾರಣಕ್ಕಾಗಿ ಮನೆ ಬಿಟ್ಟು ಹೋಗುತ್ತಾರೆ. ಇಬ್ಬರು ತಪ್ಪಿಸಿಕೊಂಡು ಒಟ್ಟಿಗೆ ಸೇರುತ್ತಾರೆ. ನಂತರ ಒಂದೊಂದು ಭಾಗದಲ್ಲಿ ಒಬ್ಬೊಬ್ಬರನ್ನು ಭೇಟಿ ಮಾಡಿ ಸಹಾಯ ತೆಗೆದುಕೊಂಡು , ಅವರದೊಂದು ಗುರಿ ಇರುತ್ತದೆ. ಆ ಗುರಿಗೆ ಚಿತ್ರದ ಶೀರ್ಷಿಕೆ ಅನ್ವಯವಾಗುತ್ತದೆ. ಮುಂದೇನು ಎಂಬುದನ್ನು ಸಿನಿಮಾ ನೋಡಬೇಕಂತೆ.ರಾಜಧಾನಿ ಶೂಟಿಂಗ್ ಸಂದರ್ಭದಲ್ಲಿ ಕಷ್ಟಬಂದಾಗ ಸಹಾಯ ಮಾಡಿದ ಯಶ್ ಗುಣವನ್ನು ನೆನಪು ಮಾಡಿಕೊಂಡ ನಿರ್ದೇಶಕ ರವಿತೇಜ, ಇವರ ಶಿಪಾರಸ್ಸಿನಿಂದಲೇ ಮೊದಲಬಾರಿ ವಿಮಾನದಲ್ಲಿ ಪ್ರಯಾಣ ಮಾಡಲಾಗಿತ್ತು. ಕನ್ನಡ ಚಿತ್ರರಂಗ ಭಾರತದ ಮಟ್ಟಿಗೆ ಬೆಳೆಯಬೇಕೆಂದು ಆ ದಿನದಂದೇ ಆಸೆ ಪಟ್ಟಿದ್ದರು. ಆದರೆ ಕೆಜಿಎಫ್ ಮೂಲಕ ಚಂದನವನವು ವಿಶ್ವವ್ಯಾಪ್ತಿ ಹರಡಿದೆ. ಚಿಕ್ಕಮಗಳೂರು, ಮಂಗಳೂರು, ಬೆಂಗಳೂರು, ಶ್ರೀರಂಗಪಟ್ಟಣ ಮತ್ತು ಮೈಸೂರು ಭಾಗದಲ್ಲಿರುವ ಒಟ್ಟಾರೆ ಇನ್ನೂರು ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದರ ವ್ಯಾಖ್ಯಾನವನ್ನು ಬಿಚ್ದಿಟ್ಟರು.ಮುಖ್ಯ ಭೂಮಿಕೆಯಲ್ಲಿ ಅಪೇಕ್ಷಾಪುರೋಹಿತ್‍ಗೆ ಬೆಲವೆಣ್ಣು ಪಾತ್ರ, ಗೌಡರ ಮಗಳಾಗಿ ದಂತವೈದ್ಯೆ ಜಾನ್ವಿಜ್ಯೋತಿ, ಪೋಲೀಸ್ ಅಧಿಕಾರಿಯಾಗಿ ಕುಮಾರ್‍ನವೀನ್, ಯುವಕನಾಗಿ ಮಹೇಶ್‍ಸಿದ್ದು, ಸಂಗೀತ ನಿರ್ದೇಶಕ ಕದ್ರಿಮಣಿಕಾಂತ್, ಛಾಯಾಗ್ರಾಹಕ ಅಭಿ ಚುಟುಕು ಮಾತನಾಡಿದರು.
ನಿರ್ದೇಶಕ ನನ್ನ ಶಿಷ್ಯನೆಂದು ಹೇಳಿಕೊಳ್ಳಲು ಹೆಮ್ಮೆ ಯಾಗುತ್ತದೆ. ಮಳೆಬಿಲ್ಲು ಧಾರವಾಹಿಯಲ್ಲಿ ಯಶ್ ಅಭಿನಯಿಸುವಾಗ ಅವರಿಗೆ 19 ವರ್ಷ. ಪ್ರಾರಂಭದಿಂದಲೂ ಶಿಸ್ತು, ಶ್ರದ್ದೆ, ಸಂಕಲ್ಪ ಅಳವಡಿಸಿಕೊಂಡಿರುವುದರಿಂದಲೇ ಇಂದು ಈ ಸ್ಥಾನಕ್ಕೆ ಬಂದಿದ್ದಾರೆ. ಸ್ಯಾಂಡಲ್‍ವುಡ್‍ಗೆ ಒಂಥರ ರೋಲ್ ಮಾಡಲ್ ಎಂದು ಉಷಾಭಂಡಾರಿ ಪಾತ್ರದ ವಿವರಣೆ ನೀಡಲಿಲ್ಲ.
ಇದೇ ಸಂದರ್ಭದಲ್ಲಿ ಯಶ್‍ಗೆ ನಿರ್ಮಾಪಕ ಅನಿಲ್‍ಪೂಜಾರಿ ಬೆಳ್ಳಿ ಕಿರೀಟದೊಂದಿಗೆ ಸನ್ಮಾನಿಸಿದರು. ಕಲಂಗರಿಹಣ್ಣಿನಲ್ಲಿ ಯಶ್ ಅವರ ಭಾವಚಿತ್ರವನ್ನು ಸಿದ್ದಪಡಿಸಿದ್ದನ್ನು ಅಭಿಮಾನಿಯೊಬ್ಬರು ಉಡುಗೊರೆಯಾಗಿ ನೀಡಿದರು. ಚಿತ್ರವು ಸದ್ಯದಲ್ಲೆ ಸೆನ್ಸಾರ್‍ಗೆ ಹೋಗಲಿದ್ದು, ಮುಂದಿನ ತಿಂಗಳು ತೆರೆಕಾಣುವ ಸಾದ್ಯತೆ ಇದೆ.
Pingback: Devops solutions