ಡಿವೋರ್ಸ್ ನಂತರ ಸಮಂತಾ ರುತ್ ಪ್ರಭು, ನಿರ್ದೇಶಕ ರಾಜ್ ನಿಡಿಮೋರು ಜೊತೆಗೆ ಡೇಟಿಂಗ್ ನಲ್ಲಿರುವ ವದಂತಿಗಳ ನಡುವೆ ತಿರುಪತಿಯಲ್ಲಿ ಇಬ್ಬರು ಒಟ್ಟಾಗಿ ಕಾಣಸಿಕೊಂಡಿದ್ದಾರೆ.
ರಾಜ್ ನಿಡಿಮೋರು, ಸಮಂತ್ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಕಾಣಿಸಿಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಡಿವೋರ್ಸ್ ನಂತರ ಸಮಂತಾ ನಿಡಿಮೋರು ಜೊತೆಗೆ ಡೇಟಿಂಗ್ ನಲ್ಲಿದ್ದಾರೆ ಎಂದು ವದಂತಿ ಸದ್ದು ಮಾಡಿತ್ತು.
ವೆಬ್ ಸಿರೀಸ್, ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ, ನಿಡಿಮೋರು ಜೊತೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ತಿರುಪತಿ ತಿಮ್ಮಪ್ಪನ ಸನ್ನಧಿಗೆ ಭೇಟಿ ನೀಡಿ, ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಬ್ಬರು ಒಟ್ಟಿಗೆ ದೇವಸ್ಥಾನದೊಳಗೆ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಸಮಂತಾ ಗುಲಾಬಿ ಸಲ್ವಾರ್ ಸೂಟ್ ನಲ್ಲಿದ್ದರೆ, ರಾಜ್ ನಿಡಿಮೋರು ನೀಲಿ ಶರ್ಟ್ ಮತ್ತು ಬಿಳಿ ಪಂಚೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ಇಬ್ಬರೂ ಒಟ್ಟಿಗೆ ದೇವಸ್ಥಾನ ಪ್ರವೇಶಿಸುತ್ತಾರೆ. ಸಮಂತಾ ಅಥವಾ ರಾಜ್ ನಿಡಿಮೋರು ಡೇಟಿಂಗ್ ವದಂತಿಗಳ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಸಮಂತಾ ‘ರಕ್ತ ಬ್ರಹ್ಮಾಂಡ್: ದಿ ಬ್ಲಡಿ ಕಿಂಗ್‌ಡಮ್’ ಚಿತ್ರದಲ್ಲಿ ನಿಡಿಮೋರ್ ಜೊತೆಗೆ ಕೆಲಸ ಮಾಡಿದ್ದಾರೆ.

Be the first to comment