‘ರಣಂ’ ಚಿತ್ರದಲ್ಲಿ ಅತಿರಥ ಮಹಾರಥರ ತಂಡವೇ ಸೇರಿಕೊಂಡಿದೆ. ಪ್ರಸಕ್ತ ಸ್ಟಾರ್ ನಟಿ ಅನುಷ್ಕಾಶೆಟ್ಟಿ ಅವರನ್ನು ಪರಿಚಯಿಸಿದ ತೆಲುಗು ನಿರ್ದೇಶಕ ವಿ.ಸಮುದ್ರ, ಯುವರಾಜ, ಬಹದ್ದೂರ್, ಭರ್ಜರಿ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಆರ್.ಶ್ರೀನಿವಾಸ್, ಆ ದಿನಗಳ ಖ್ಯಾತಿಯ ಚೇತನ್, ಚಿರಂಜೀವಿಸರ್ಜಾ, ವರಲಕ್ಷೀಶರತ್‍ಕುಮಾರ್, ಭರ್ಜರಿಚೇತನ್‍ಕುಮಾರ್-ಎ.ಪಿಅರ್ಜುನ್ ಸಾಹಿತ್ಯದ ಆರು ಹಾಡುಗಳಿಗೆ ಸಂಗೀತ ಒದಗಿಸಿರುವ ರವಿಶಂಕರ್, ಸಾಹಸ ಡಾ.ರವಿವರ್ಮ-ಥ್ರಿಲ್ಲರ್‍ಮಂಜು, ಛಾಯಾಗ್ರಹಣ ನಿರಂಜನ್‍ಬಾಬು, ಸಂಕಲನ ದೀಪು.ಎಸ್.ಕುಮಾರ್ ಇನ್ನು ಮುಂತಾದ ಪ್ರತಿಭೆಗಳು ಇರುವುದರಿಂದಲೇ ಸಿನಿಮಾಕ್ಕೆ ಹೈಪ್ ಕ್ರಿಯೆಟ್ ಆಗಿದೆ.
ಕತೆಯ ಕುರಿತು ಹೇಳುವುದಾದರೆ ಗತಕಾಲದಿಂದಲೂ ಪ್ರಭುತ್ವ, ರಾಜಕೀಯ ಧುರೀಣರು ಬರುತ್ತಿದ್ದಾರೆ,ಹೋಗುತ್ತಿದ್ದಾರೆ. ಎಲ್ಲರೂ ಸ್ವಾರ್ಥ ರೀತಿಯಲ್ಲಿ ಅಭಿವೃದ್ದಿಗೊಳ್ಳುತ್ತಿದ್ದಾರೆ. ಆದರೆ ವ್ಯವಸಾಯವನ್ನೇ ನಂಬಿಕೊಂಡು ಬದುಕುತ್ತಿರುವ ರೈತರ ಬಗ್ಗೆ ಶೇಕಡ ಒಂದರಷ್ಟು ಕಾಳಜಿ ವಹಿಸಿಕೊಂಡಿಲ್ಲದ ಕಾರಣ, ಅವರು ಹಾಗೆಯೇ ಜೀವನ ಸಾಗಿಸುತ್ತಿದ್ದಾರೆ. ರೈತ ಎಂದರೆ ಅನ್ನದಾತ ಎಂದು ಮಾತನಾಡುತ್ತಾರೆ ಹೊರತು ಇವರ ಬೆಳವಣಿಗೆಗೆ ಯೋಜನೆ ರೂಪಿಸಿರುವುದಿಲ್ಲ. ನಮ್ಮ ಅನ್ನದಾತರು ಚೆನ್ನಾಗಿರಬೇಕೆಂದು ಒಂದು ಯುವಕರ ಪಡೆಯೊಂದು ಅವರ ಪರ ಕಾಳಜಿ ವಹಿಸಿಕೊಂಡು ಹೋರಾಡುವುದೇ ರಣಂ ಒಂದು ಏಳೆಯ ಸಾರಾಂಶವಾಗಿದೆ. ಬೆಂಗಳೂರು, ಚಿಂತಾಮಣಿ, ಮಡಕೇರಿ, ಬಳ್ಳಾರಿ, ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.ಯುವನಾಯಕನಾಗಿ ಚೇತನ್ ಮುಖ್ಯ ಪಾತ್ರ, ಸಿಬಿಐ ಅಧಿಕಾರಿಯಾಗಿ ವರಲಕ್ಷೀಶರತ್‍ಕುಮಾರ್, ಪೋಲೀಸ್ ಇನ್ಸ್‍ಪೆಕ್ಟರ್ ಆಗಿ ಚಿರಂಜೀವಿಸರ್ಜಾ, ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಹಾಸನದ ದಂತವೈದ್ಯೆ ನೀತೂಗೌಡ ಅಭಿನಯಿಸಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕಳೆದ ತಿಂಗಳು ಚಿತ್ರೀಕರಣ ಸಂದರ್ಭದಲ್ಲಿ ಮೃತಪಟ್ಟ ಇಬ್ಬರಿಗೆ ಮೌನಾಚರಣೆಯನ್ನು ತಂಡವು ನಡೆಸಿತು. ಅಗಲಿದ ಕುಟುಂಬಕ್ಕೆ ಈಗಾಗಲೇ ನಿರ್ಮಾಪಕರು ಪರಿಹಾರ ನೀಡಿದ್ದಾರೆ. ಮುಖ್ಯ ಅತಿಥಿಯಾಗಿ ಮಮತಾದೇವರಾಜ್ , ಹಿರಿಯ ವಿತರಕ ಭಾಷಾ, ಕಟ್ಟೆರಾಮಚಂದ್ರ ನಟಿ ನಿಮಿತಾರತ್ನಾಕರ್ ಮುಂತಾದವರು ಉಪಸ್ತಿತರಿದ್ದರು. ಚಿತ್ರವು ಸದ್ಯದಲ್ಲೆ ಬಿಡುಗಡೆಯಾಗುವ ಸಾದ್ಯತೆ ಇದೆ.
Be the first to comment