‘ಸತೀಶ್ ಆಡಿಯೋ ಹೌಸ್’ ಶುರು..!

ಇತ್ತೀಚಿಗಷ್ಟೇ ಸತೀಶ್ ನಿನಾಸಂ ಹಾಗೂ ಉದಯ್ ಮೆಹ್ತಾ ಕಾಂಬಿನೇಷನ್​ನ ‘ಬ್ರಹ್ಮಚಾರಿ’ ಸಿನಿಮಾ ಸೆಟ್ಟೇರಿ ಅಭಿಮಾನಿಗಳಲ್ಲಿ ಸಂತಸ ತಂದಿತ್ತು. ಇದೀಗ ಸತೀಶ್ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಹೌದು, ಸತೀಶ್ ನಿರ್ಮಾಣದಲ್ಲಿ “ಸತೀಶ್ ಆಡಿಯೋ ಹೌಸ್” ಅನ್ನೋ ಹೊಸ ಯೂಟ್ಯೂಬ್ ಚಾನೆಲ್​ ಶುರುವಾಗಿದೆ. ಈ ಬಗ್ಗೆ ಸತೀಶ್ ಟ್ವೀಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. “ಸತೀಶ್ ಆಡಿಯೋ ಹೌಸ್” ಇದೊಂದು ಅತ್ಯುತ್ತಮ ಲೈಬ್ರರಿ ಆಗಬಹುದು ಎಂಬ ನಿರೀಕ್ಷೆಯೊಂದಿಗೆ ಪ್ರಾರಂಭಿಸಿದ್ದೇವೆ. ಸಬ್​ಸ್ಕ್ರೈಬ್ ಮಾಡಿ. ಶ್ರೀಘ್ರದಲ್ಲೇ ನಮ್ಮ ಮೊದಲ ಕಿರುಚಿತ್ರವಾಗಿ “ಕಾಜಿ” ಅಪ್ ಲೋಡ್ ಆಗಲಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೆ ಇರಲಿ. ಎಲ್ಲರೂ ಶೇರ್ ಮಾಡಿ ಅಂತಾ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ಇನ್ನು 2014 ರಲ್ಲಿ ಸತೀಶ್ ಮೀಡಿಯಾ ಹೌಸ್ ಅನ್ನೋ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದ್ರು. ಆ ಬ್ಯಾನರ್​ನಡಿಯಲ್ಲಿ ಮೊದಲ ಚಿತ್ರವಾಗಿ ‘ರಾಕೆಟ್’ ಒಳ್ಳೆಯ ಯಶಸ್ಸು ಗಳಿಸಿತ್ತು. ಇದೀಗ ಆಡಿಯೋ ಸಂಸ್ಥೆ ಶುರುವಾಗಿದ್ದು ಸತೀಶ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!