ರಾಜ್ಯದಾದ್ಯಂತ ‘ಕೋರ’ ಕನ್ನಡ ಚಲನಚಿತ್ರ ಗುರುವಾರ ಬಿಡುಗಡೆ ಆಗಲಿದೆ.
ಕೋರ ಸಿನಿಮಾದಲ್ಲಿ ಸುನಾಮಿ ಕಿಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಚರಿಷ್ಮಾ, ವಿಲನ್ ಪಾತ್ರದಲ್ಲಿ ಪಿ. ಮೂರ್ತಿ ಕಾಣಿಸಿಕೊಂಡಿದ್ದಾರೆ.
ಕೋರ ಚಿತ್ರವು ಅದ್ದೂರಿಯಾಗಿ ಮೂಡಿ ಬಂದಿದೆ. ಗುರುವಾರ ಬೆಳಿಗ್ಗೆ 10.30 ಕ್ಕೆ ರಬಕವಿಯ ಮಲ್ಲಿಕಾರ್ಜುನ ಶ್ರೀನಿವಾಸ್ ಚಿತ್ರಮಂದಿರ ಮತ್ತು ಮಾಲಿಂಗಪುರ, ಬೆಳಗಾವಿ, ಗೋಕಾಕ, ಜಮಖಂಡಿ ಹೀಗೆ ರಾಜ್ಯದ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಆಗಲಿದೆ.
‘ಕೋರದಲ್ಲಿ ಬುಡುಕಟ್ಟು ಜನಾಂಗದ ಕಥೆ ಹೇಳಲು ಹೊರಟಿದ್ದೇವೆ. ಅವರಿಂದಲೇ ಇಂದು ಕಾಡು ಉಳಿದಿದೆ. ನಾವೆಲ್ಲರೂ ಬುಡಕಟ್ಟು ಜನಾಂಗದವರನ್ನು ಉಳಿಸೋ ಕೆಲಸ ಮಾಡಬೇಕಾಗಿದೆ. ಅವರ ಭಾವನೆಗಳು, ಆಚಾರ, ವಿಚಾರ, ನೋವು ಸಿನಿಮಾದಲ್ಲಿದೆ. ತುಂಬಾ ದೊಡ್ಡ ಸ್ಕೇಲ್‌ನಲ್ಲಿ ಆಕ್ಷನ್ ಪ್ಯಾಕೇಜ್ ಜೊತೆಗೆ ಇದೆಲ್ಲವನ್ನು ಕಟ್ಟಿಕೊಡಲಾಗಿದೆ. ನಿರ್ಮಾಪಕರು ಇದಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದ್ದು ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗುತ್ತಿದೆ’ ಎಂದು ನಿರ್ದೇಶಕ ಶ್ರೀ ಹೇಳಿದ್ದಾರೆ.
‘ಒರಟ ಐ ಲವ್ ಯೂ’ ಸಿನಿಮಾ ಮಾಡಿ ಗುರುತಿಸಿಕೊಂಡಿದ್ದ ಶ್ರೀ ‘ಕೋರ’ಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಶಶಾಂಕ್ ಶೇಷಗಿರಿ ಮಾಡಿದ್ದಾರೆ. ರತ್ನಮ್ಮ ಮೂವೀಸ್ ಬ್ಯಾನರ್ ಅಡಿಯಲ್ಲಿ ಪಿ. ಮೂರ್ತಿ ‘ಕೋರ’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಹೇಮಂತ್ ಕುಮಾರ್ ಸಂಗೀತ, ಸೆಲ್ವಂ ಛಾಯಾಗ್ರಹಣ, ಕೆ.ಗಿರೀಶ್ ಕುಮಾರ್ ಸಂಕಲನ, ರವಿವರ್ಮಾ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಸಕಲೇಶಪುರ, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ಬೆಂಗಳೂರಿನಲ್ಲಿ ‘ಕೋರ’ ಸಿನಿಮಾ ಸೆರೆ ಹಿಡಿಯಲಾಗಿದೆ.
—-

Be the first to comment