ಭಾರತೀಯ ಚಿತ್ರರಂಗ ಕಂಡಿರುವ ಅಪರೂಪದ ನಟಿ ಶ್ರೀದೇವಿ ಅವರ ಬಯೋಪಿಕ್‌ನಲ್ಲಿ ಪೂಜಾ ಹೆಗ್ಡೆ, ಶ್ರೀದೇವಿಯಾಗಿ ನಟಿಸಲು ಸಿದ್ಧ ಎಂದಿದ್ದಾರೆ.
ಶ್ರೀದೇವಿ ಜೀವನಗಾಥೆಯನ್ನು ಸಿನಿಮಾ ರೂಪಕ್ಕೆ ತರುವ ಪ್ರಯತ್ನ ನಡೆಯುತ್ತಲೆ ಇದೆ. ಶ್ರೀದೇವಿ ವರ್ಣರಂಜಿತ ಬದುಕನ್ನು ಬೆಳ್ಳಿತೆರೆಯಲ್ಲಿ ಅನಾವರಣ ಮಾಡಲು ನಿರ್ದೇಶಕರೊಬ್ಬರು ರೆಡಿಯಾಗಿದ್ದಾರೆ. ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಶ್ರೀದೇವಿ ಪಾತ್ರಕ್ಕೆ ಬಣ್ಣ ಹಚ್ಚೋದಿಕ್ಕೆ ಸಾಕಷ್ಟು ನಟಿಯರು ತಯಾರಾಗಿದ್ದಾರೆ.
ಕರಾವಳಿ ಮೂಲಕ ಪೂಜಾ ಹೆಗ್ಡೆ, ಶ್ರೀದೇವಿ ಬಯೋಪಿಗೆ ಜೀವ ತುಂಬಲು ರೆಡಿ ಎಂದಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೂಜಾ, ‘ನಾನು ಶ್ರೀದೇವಿ ಅವರ ದೊಡ್ಡ ಅಭಿಮಾನಿ. ನಾನು ಈಗಾಗಲೇ ಅವರ ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದೇನೆ. ಶ್ರೀದೇವಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕರೆ ಖಂಡಿತ ಮಿಸ್ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಮೂಲತಃ ಕನ್ನಡದವರಾದ ಪೂಜಾ, ತೆಲುಗು, ಹಿಂದಿ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಸದ್ಯ ಪೂಜಾ ಹೆಗ್ಡೆ, ವಿಜಯ್ ದಳಪತಿ ನಟನೆಯ ಕೊನೆಯ ಸಿನಿಮಾ ‘ಜನನಾಯಗನ್ ‘ಹಾಗೂ ಸೂರ್ಯ ನಟಿಸುತ್ತಿರುವ ‘ರೆಟ್ರೋ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೂಜಾ ಹೆಗ್ಡೆ ಬಹಳ ದಿನಗಳ ಬಳಿಕ ತೆಲುಗಿನಲ್ಲಿ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.
—-

Be the first to comment