‘ಹುಡುಗರು’ ಸಿನಿಮಾ ನಟಿ ಅಭಿನಯ ಬಾಲ್ಯದ ಗೆಳೆಯ ಕಾರ್ತಿಕ್ ಜೊತೆ ಹಣೆಮಣೆ ಏರಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗ ಕಂಡ ಅಪರೂಪ ನಟಿ ಅಭಿನಯ ಹೊಸ ಬಾಳಿಗೆ ಹೆಜ್ಜೆ ಹಾಕಿದ್ದಾರೆ. ಹೈದ್ರಾಬಾದ್ ನಲ್ಲಿ ಹಸೆಮಣೆ ಏರಿದ್ದಾರೆ. ಅಭಿನಯ -ಕಾರ್ತಿಕ್ ಮದುವೆ ಶಾಸ್ತ್ರಗಳು ಜೋರಾಗಿ ನಡೆದಿವೆ. ಆತ್ಮೀಯರು, ಕುಟುಂಬಸ್ಥರು ಮದುವೆಗೆ ಶುಭಾಶಯ ಕೋರಿದ್ದಾರೆ.
ನೇರಳೆ ಬಣ್ಣದ ಲೆಹಂಗ ಧರಿಸಿ ಅಭಿನಯ ಕಂಗೊಳಿಸಿದ್ದಾರೆ. ಕಾರ್ತಿಕ್ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮೆಹಂದಿ ಶಾಸ್ತ್ರದಲ್ಲಿ ಈ ಜೋಡಿ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದೆ.
ಅಭಿನಯ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 58ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಾತು ಬಾರದೆ, ಕಿವಿ ಕೇಳದೇ ಇದ್ರು ಅಭಿನಯ ಯಾವುದೇ ಪಾತ್ರಕ್ಕೆ ಜೀವ ತುಂಬುತ್ತಾರೆ. ಕನ್ನಡದ ಸೂಪರ್ ಹಿಟ್ ಚಿತ್ರ ಹುಡುಗರು ಸಿನಿಮಾದಲ್ಲಿ ಪುನೀತ್ ತಂಗಿಯಾಗಿ ನಟಿಸಿದ್ದರು. ಅಭಿನಯ ನಟಿಸಿದ್ದ ಮಲಯಾಳಂ ಸಿನಿಮಾ ʻಪಾನಿʼ ಕಳೆದ ವರ್ಷ ತೆರೆ ಕಂಡಿತ್ತು. ʻಪಾನಿʼ ಮಲಯಾಳಂ ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಮಾಯಿ ಮಾಡಿತ್ತು.
—

Be the first to comment