ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಅಭಿಯಿಸಿರೋ ಚೊಚ್ಚಲ ಸಿನಿಮಾ ‘ಬಿಚ್ಚುಗತ್ತಿ’ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ. ಸಾಹಿತಿ ಬಿ. ಎಲ್ ವೇಣು ಕಾದಂಬರಿ ಆಧಾರಿತ ಐತಿಹಾಸಿಕ ಸಿನಿಮಾ ಇದಾಗಿದ್ದು ಬಿಚ್ಚುಗತ್ತಿ ಭರಮಣ್ಣನ ಪಾತ್ರದಲ್ಲಿ ರಾಜವರ್ಧನ್ ಮಿಂಚಿದ್ದಾರೆ. ಚಿತ್ರದುರ್ಗದ ಹೆಮ್ಮೆಯ ನಾಯಕ ಭರಮಣ್ಣನ ಜೀವನಧಾರಿತ ಕಥೆಯನ್ನು ಹೊಂದಿದ್ದು ಚಿತ್ರಕ್ಕೆ ದಳವಾಯಿ ದಂಗೆ ಅನ್ನೋ ಅಡಿ ಬರಹ ನೀಡಲಾಗಿದೆ.
ಚಿತ್ರದ ಕಥೆ ಆಮೋಘವಾಗಿದ್ದು ಇದೀಗ ಪರಭಾಷೆಯಿಂದಲೂ ಡಬ್ಬಿಂಗ್ ರೈಟ್ಸ್ಗೆ ಡಿಮ್ಯಾಂಡ್ ಕೇಳಿಬರುತ್ತಿದೆ. ಚಿತ್ರಕ್ಕೆ ವಿಕ್ಟರಿ-2 ಸಿನಿಮಾ ನಿರ್ದೇಶನ ಮಾಡಿದ್ದ ಹರಿಸಂತೋಷ್ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ಹರಿಪ್ರಿಯಾ ಸಿದ್ದಾಂಬೆ ಅನ್ನೋ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಚಿತ್ರದುರ್ಗದ ಕೋಟೆ ಸೇರಿದಂತೆ ಬಹುತೇಕ ಕಡೆಗಳಲ್ಲಿ ನಡೆದಿದ್ದು ಕುದುರೆ ಸವಾರಿ ಕಣ್ಣಿಗೆ ಹಬ್ಬ ನೀಡಲಿದೆ. ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಂಗೀತವಿದೆ. ಇದೊಂದು ಕಲಾತ್ಮಕ ಸಿನಿಮಾವಾಗಿದ್ದು ನಾಡಿನ ನಾಯಕನ ಸಾಹಸಗಾಥೆಯನ್ನು ಸಾರುವ ಸಿನಿಮಾವಾಗಿ ಕುತೂಹಲ ಹೆಚ್ಚಿಸಿದೆ.
Follow us on:
You Tube :Bcinemas Facebook : bcinemasmedia Twitter : bcinemasmedia Instagram :bcinemasmedia

Be the first to comment