ನಿವೇದಿತಾ ಶಿವರಾಜ್‌ಕುಮಾರ್ ಅವರ ಚೊಚ್ಚಲ ನಿರ್ಮಾಣದ ಫೈರ್‌ಫ್ಲೈನಲ್ಲಿ ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ .
ಭಾನುವಾರ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ ಟ್ರೇಲರ್, ಭಾವನಾತ್ಮಕವಾಗಿ ನಾಯಕನ ಮೇಲೆ ಬೆಳಕು ಚೆಲ್ಲುತ್ತದೆ. ಕೊನೆಯಲ್ಲಿ ಶಿವಣ್ಣ ಅವರ ಅನಿರೀಕ್ಷಿತ ಅತಿಥಿ ಪಾತ್ರ ಕುತೂಹಲ ಹುಟ್ಟುಹಾಕುತ್ತದೆ. ಏಪ್ರಿಲ್ 24 ರಂದು ಚಿತ್ರ ಬಿಡುಗಡೆಯಾಗುವಾಗ ಶಿವರಾಜ್‌ಕುಮಾರ್ ಪಾತ್ರದ ಹೆಚ್ಚಿನ ಮಾಹಿತಿ ಬಹಿರಂಗವಾಗಲಿದೆ.
ಫೈರ್‌ಫ್ಲೈ ದುಃಖ ಮತ್ತು ಗುಣಪಡಿಸುವಿಕೆಯನ್ನು ಆಧಾರವಾಗಿ ಅನ್ವೇಷಿಸುತ್ತದೆ. ಈ ಚಿತ್ರ ಸಂಕೀರ್ಣವಾದ ಭಾವನೆಯನ್ನು ಹಗುರವಾಗಿ ಪ್ರದರ್ಶಿಸುವ ಪ್ರಯತ್ನವಾಗಿದೆ. ವಂಶಿ ಕೃಷ್ಣ ಅವರ ಜೀವನವನ್ನು ಅನುಸರಿಸುತ್ತದೆ. ಅವರು ನಿದ್ರಾಹೀನತೆಯಿಂದ ಹೋರಾಡುವ ಮತ್ತು ಮರೆಯಾಗಲು ನಿರಾಕರಿಸುವ ನೆನಪುಗಳನ್ನು ಎದುರಿಸುತ್ತಿರುವ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಚನಾ ಇಂದರ್, ಶೀತಲ್ ಶೆಟ್ಟಿ, ಅಚ್ಯುತ್ ಕುಮಾರ್, ಸುಧಾರಾಣಿ, ವೀಣಾ, ಸುಂದರ್ ಮತ್ತು ಸಿಹಿ ಕಹಿ ಚಂದ್ರು ಇದ್ದಾರೆ.
ಶ್ರೀ ಮುತ್ತು ಸಿನಿ ಸರ್ವೀಸಸ್ ಬ್ಯಾನರ್ ನ ಫೈರ್‌ಫ್ಲೈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತ, ಅಭಿಲಾಷ್ ಕಲಾಥಿ ಅವರ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ ಇದೆ.
—-

Be the first to comment